ಕೊರಟಗೆರೆ: ಪೂರ್ವ ಮುಂಗಾರು ಮಳೆ ಕೊರತೆಯಿಂದಾಗಿ ತಾಲ್ಲೂಕಿನ ಜನರು ಹೈರಾಣಾಗಿದ್ದಾರೆ. ಮೇ ತಿಂಗಳು ಮುಗಿಯುತ್ತಾ ಬಂದರೂ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ಭೂಮಿ ಇನ್ನೂ ಬಿಸಿಗಾಳಿಯಲ್ಲೇ ತತ್ತರಿಸುತ್ತಿದೆ. ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ.

ಗುರುವಾರ ರಾತ್ರಿ ತಾಲ್ಲೂಕಿನ ಕೆಲವೆಡೆ ಗಾಳಿ ಸಹಿತ ಮಳೆಯಾಗಿದೆ. ಗಾಳಿಯೇ ಹೆಚ್ಚಿದ್ದು, ಮಳೆ ಪ್ರಮಾಣ ಕಡಿಮೆ ಇತ್ತು. ತಿಂಗಳಗಟ್ಟಲೇ ಬಿಸಿಲಿಗೆ ಒಣಗಿದ್ದ ನೆಲ ಆ ನೀರನ್ನು ಕ್ಷಣಾರ್ಧದಲ್ಲೇ ಹೀರಿಕೊಂಡಿದೆ. ಕೆರೆ–ಕಟ್ಟೆ, ಹಳ್ಳ–ಕೊಳ್ಳಗಳು ಇನ್ನೂ ನೀರಿನಿಂದ ತುಂಬದಿರುವುದು ಗ್ರಾಮೀಣ ಜನರ ಆತಂಕ ಹೆಚ್ಚಿಸಿದೆ. ಭೂಮಿಯಲ್ಲಿನ ತೇವಾಂಶ ಸಂಪೂರ್ಣ ಕುಸಿದಿರುವ ಕಾರಣ ಬಿತ್ತನೆಗೆ ಬೇಕಾದ ತೇವಾಂಶ ಇನ್ನೂ ನಿರ್ಮಾಣವಾಗಿಲ್ಲ.

ತಾಲ್ಲೂಕಿನ ಬಹುತೇಕ ರೈತರು ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುತ್ತಾರೆ. ಜೂನ್ ಆರಂಭಕ್ಕೆ ಬಿತ್ತನೆ ಆರಂಭಿಸುವ ನಿರೀಕ್ಷೆಯಲ್ಲಿದ್ದ ರೈತರು ಇದೀಗ ಆಕಾಶದತ್ತ ಕಾದು ನೋಡುವ ಸ್ಥಿತಿ ಇದೆ. ಜೋಳ, ರಾಗಿ, ಕಡಲೆ, ತೊಗರಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಮಳೆ ಕೊರತೆಯಿಂದ ಹೊಲಕ್ಕೆ ಇಳಿಯಲಾಗದೆ ತಲ್ಲಣಗೊಳ್ಳುತ್ತಿದ್ದಾರೆ.

ಕೆಲ ರೈತರು ಈಗಾಗಲೇ ಜಮೀನು ಹದ ಮಾಡಿಕೊಳ್ಳಲು, ಬೀಜ ಮತ್ತು ರಸಗೊಬ್ಬರ ಖರೀದಿ ಮಾಡಿಕೊಳ್ಳಲು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಮುಂಗಾರು ತಡವಾಗುತ್ತಿರುವುದರಿಂದ ಬಿತ್ತನೆ ಸಮಯ ಕೈತಪ್ಪುವ ಆತಂಕ ರೈತರನ್ನು ಕಾಡುತ್ತಿದೆ.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈಗಾಗಲೇ ಕೊಳವೆ ಬಾವಿಗಳ ನೀರಿನ ಮಟ್ಟ ಕುಸಿದಿದೆ. ಕೆಲವೆಡೆ ದಿನಕ್ಕೆ ಕೆಲವೇ ಗಂಟೆಗಳು ಮಾತ್ರ ನೀರು ಬರುತ್ತಿದ್ದು, ಇನ್ನೂ ಕೆಲವು ಬೋರ್ವೆಲ್ಗಳು ಸಂಪೂರ್ಣ ಬತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಜನರು ಟ್ಯಾಂಕರ್ ಹಾಗೂ ದೂರದ ಬಾವಿಗಳನ್ನು ಅವಲಂಬಿಸುವ ಪರಿಸ್ಥಿತಿ ಎದುರಾಗಲಿದೆ.

ಬೇಸಿಗೆಯ ತಾಪಮಾನ ಹೆಚ್ಚುತ್ತಿರುವ ಕಾರಣ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗುತ್ತಿದೆ. ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೆ ಸಾಕುಪ್ರಾಣಿಗಳು ನೀರಿಗಾಗಿ ಅಲೆದಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಕಾಡಂಚಿನ ಪ್ರದೇಶಗಳಲ್ಲಿ (ಸಿದ್ಧರಬೆಟ್ಟ, ಸಾಗ್ಗೆರೆ) ಪ್ರಾಣಿ–ಪಕ್ಷಿಗಳಿಗೂ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ.

ತಾಲ್ಲೂಕಿನ ಅನೇಕ ಕೆರೆಗಳು ಈಗಾಗಲೇ ಬರಿದಾಗಿದ್ದು, ಕೆಲವು ಕೆರೆಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರು ಉಳಿದಿದೆ. ಕೊರಟಗೆರೆ ಪಟ್ಟಣಕ್ಕೆ ನೀರುಣಿಸುವ ಜಂಪೇನಹಳ್ಳಿ ಕೆರೆ ನೀರು ಖಾಲಿಯಾಗುತ್ತಿದೆ. ವಾರದಲ್ಲಿ ಕೆರೆ ಸಂಪೂರ್ಣ ಖಾಲಿಯಾಗಲಿದೆ.

ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊಳವೆಗಳು ವಾರಕ್ಕೆ ಕೆಲವೇ ದಿನ ಕಾರ್ಯನಿರ್ವಹಿಸುತ್ತಿವೆ. ಕೆಲವೆಡೆ ಮಹಿಳೆಯರು ಬೆಳಗ್ಗೆಯೇ ನೀರಿಗಾಗಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಹವಾಮಾನ ಬದಲಾವಣೆ?: ಪ್ರತಿ ವರ್ಷ ಹವಾಮಾನದಲ್ಲಿ ವ್ಯತ್ಯಾಸ ಕಂಡು ಬರುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ ರೈತರ ಬದುಕನ್ನೇ ಅಸ್ಥಿರಗೊಳಿಸಿದೆ. ಈ ಬಾರಿ ಮುಂಗಾರು ವಿಳಂಬವಾಗಿರುವುದು ಹವಾಮಾನ ಬದಲಾವಣೆಯ ಪರಿಣಾಮವೇ ಎಂಬ ಚರ್ಚೆಯೂ ಗ್ರಾಮೀಣ ಭಾಗದಲ್ಲಿ ಕೇಳಿಬರುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-17-2097345781

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.