ಕೊರಟಗೆರೆ: ತಾಲ್ಲೂಕಿನ ಫ್ರೆಂಡ್ಸ್ ಗ್ರೂಪ್ ಹಾಗೂ ಜಗ್ಗೇಶ್ ಅಭಿಮಾನಿ ಬಳಗದಿಂದ ಉಚಿತ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಗುರುವಾರ ನಡೆಯಿತು.

ಚಿತ್ರನಟ ಹಾಗೂ ಸಂಸದ ಜಗ್ಗೇಶ್ ಮಾತನಾಡಿ, ‘ಸಮಾಜ ಸೇವೆ ಎಂಬುದು ಕೇವಲ ಮಾತಿನಲ್ಲಿ ಉಳಿಯದೆ ಕೃತಿಯಲ್ಲಿ ಮೂಡಿಬರಬೇಕು. ಆಂಬುಲೆನ್ಸ್ ಸೇವೆ ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಸಂದರ್ಭದಲ್ಲಿ ಜೀವಗಳನ್ನು ಉಳಿಸಬಲ್ಲ ಮಹತ್ವದ ಕಾರ್ಯ’ ಎಂದು ಹೇಳಿದರು.

ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಮಾನವ ಸೇವೆಯೇ ಮಾಧವ ಸೇವೆ. ಇಂತಹ ಸೇವಾ ಕಾರ್ಯಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ’ ಎಂದರು.

ಎಲೆರಾಂಪುರ ಕುಂಚಿಟಿಗ ಮಠದ ಹನುಮಂತನಾಥ ಸ್ವಾಮೀಜಿ, ‘ಗ್ರಾಮೀಣ ಭಾಗದಲ್ಲಿ ತುರ್ತು ಆರೋಗ್ಯ ಸೇವೆಗಳ ಕೊರತೆ ಇದೆ. ಈ ಆಂಬುಲೆನ್ಸ್ ಸೇವೆ ಆ ಕೊರತೆ ನೀಗಿಸಲು ಸಹಕಾರಿ’ ಎಂದರು.

ತಹಶೀಲ್ದಾರ್ ಕೆ. ಮಂಜುನಾಥ್ ಮಾತನಾಡಿದರು. ಕೆ.ವಿ.ಪುರುಷೋತ್ತಮ್ ಫ್ರೆಂಡ್ಸ್ ಗ್ರೂಪ್ ಹಾಗೂ ಜಗ್ಗೇಶ್ ಅಭಿಮಾನಿಗಳ ಸಂಘ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಆರೋಗ್ಯ ಸೇವೆ ಬಗ್ಗೆ ವಿವರಣೆ ನೀಡಿದರು.

ಹಾಸ್ಯ ಕಲಾವಿದ ಬೌಬೌ ಜಯರಾಮ್ ತಂಡದಿಂದ ಹಾಸ್ಯ ಕಾರ್ಯಕ್ರಮ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಪ್ರದೀಪ್ ಕುಮಾರ್, ಜಗ್ಗೇಶ್ ಅಭಿಮಾನಿ ಬಳಗದ ಅಧ್ಯಕ್ಷ ಮಲ್ಲಣ್ಣ, ಮಂಜುನಾಥ್, ವೈ.ಜಿ.ತೀರ್ಥೇಶ್, ಆರ್.ಮಲ್ಲಿಕಾರ್ಜುನ್, ಹನುಮಾನ್, ಎಚ್.ಕೆ.ಮಹಾಲಿಂಗಪ್ಪ, ಕೇಶವಮೂರ್ತಿ, ಬಾಲಪ್ಪ, ಸಾವಿತ್ರಮ್ಮ, ಹನುಮಂತರೆಡ್ಡಿ, ಪ್ರಸನ್ನಕುಮಾರ್, ರಘು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-17-158479678

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.