ಕೊರಟಗೆರೆ: ‘ಮೇ 1 ರಿಂದ 3ರ ವರೆಗೆ ಗೃಹ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಪುರುಷ ಮತ್ತು ಮಹಿಳೆಯರ ಕಬಡ್ಡಿ ಜಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಆಯೋಜಕ ಹಾಗೂ ಕಾಂಗ್ರೆಸ್ ಯುವ ಮುಖಂಡ ಕೆ.ಎಸ್.ವಿನಯ್ ಕುಮಾರ್ ತಿಳಿಸಿದರು.

ಜಿ.ಪರಮೇಶ್ವರ ಯುವ ಪಡೆ ಹಾಗೂ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ತುಮಕೂರು ಸಹಯೋಗದಲ್ಲಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಮೂರು ದಿನ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯ ನಡೆಸಲಾಗುವುದು. ಪುರುಷರ 16 ತಂಡ ಮತ್ತು ಮಹಿಳೆಯರ 6 ತಂಡ ಭಾಗವಹಿಸಲಿವೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ಗೌಡ ಮಾತನಾಡಿ, ಕಬಡ್ಡಿ ಪಂದ್ಯಾವಳಿಗಳಲ್ಲಿ ವಿಜೇತರಿಗೆ ಮೊದಲ ಬಹುಮಾನ ₹1 ಲಕ್ಷ, ದ್ವಿತೀಯ ₹75 ಸಾವಿರ, ತೃತೀಯ ₹50 ಸಾವಿರ, ನಾಲ್ಕನೇ ಬಹುಮಾನ ₹25 ಸಾವಿರ, ಮಹಿಳೆಯರಿಗೆ ಪ್ರಥಮದಿಂದ ನಾಲ್ಕನೇ ಸ್ಥಾನದವರೆಗೆ ₹40 ಸಾವಿರ, ₹30 ಸಾವಿರ, ₹20 ಸಾವಿರ, ₹10 ಸಾವಿರ ಬಹುಮಾನ ಪ್ರಾಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ವೀಕ್ಷಿಸಲು ಎರಡು ಗ್ಯಾಲರಿ ನಿರ್ಮಿಸಲಾಗುವುದು. ಊಟ ಮತ್ತು ತಿಂಡಿ ವ್ಯವಸ್ಥೆ ಇರಲಿದೆ ಎಂದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಮಹಿಳಾ ಅಧ್ಯಕ್ಷೆ ಜಯಮ್ಮ, ಆಯೋಜಕ ಅರವಿಂದ್ ಉಪ್ಪಿ, ಎಚ್.ಕೆ.ಮಹಾಲಿಂಗಪ್ಪ, ವಾಲೆ ಚಂದ್ರಯ್ಯ, ಎಲ್.ರಾಜಣ್ಣ, ಕೆ.ಆರ್.ಓಬಳರಾಜು, ಎಚ್.ಎಂ.ರುದ್ರಪ್ರಸಾದ್, ಜಯರಾಮ್, ವೆಂಕಟಪ್ಪ, ಸುರೇಶ್, ನಾಗಭೂಷಣ್, ವೆಂಕಟೇಶ್, ಕವಿತಾ, ಕೆ.ವಿ.ಮಂಜುನಾಥ್, ನಾಸೀರ್, ಜಮೀರ್, ರಂಗರಾಜು, ಆರಾದ್ಯ, ಕೆ.ಬಿ.ಸುನಿಲ್, ಅಟೊ ಕುಮಾರ್, ಕೆ.ಬಿ.ಲೋಕೇಶ್, ಗೋಪಿ, ಸಿ.ಡಿ.ಪ್ರಭಾಕರ, ಕೆ.ಎಲ್ ಮಂಜು, ದೀಪು, ಅಮರ್, ಸಿದ್ದಪ್ಪ, ನಾಗರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-17-102918580

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.