ಕೊರಟಗೆರೆ: ತಾಲ್ಲೂಕಿನ ಬುಕ್ಕಪಟ್ಟಣ ಕಾವಲಮ್ಮನ (ದೊಡ್ಡಮ್ಮ) ಜಲಧಿ ಜಾತ್ರೆ ಐದು ಶತಮಾನಗಳ ಇತಿಹಾಸ ಹೊಂದಿದೆ. ಈ ಬಾರಿ ಜಾತ್ರೆ ಅದ್ದೂರಿಯಾಗಿ ನಡೆಯಿತು. ಭಕ್ತಿ ಸಂಭ್ರಮದ ಮಧ್ಯೆ ಜಾತ್ರೆ ನೆರವೇರಿತು.

ಯುಗಾದಿ ನಂತರದ 15ನೇ ಸೋಮವಾರ ಈ ಜಾತ್ರೆ ಆರಂಭವಾಗುತ್ತದೆ. ಸುತ್ತಮುತ್ತಲಿನ ಮೂವತ್ತಕ್ಕೂ ಹೆಚ್ಚು ಹಳ್ಳಿಗಳ ಅಧಿದೇವತೆಯಾಗಿ ಕಾವಲ್ಲಮ್ಮನನ್ನು ಆರಾಧಿಸಲಾಗುತ್ತದೆ. ತಲೆಮಾರಗಳಿಂದಲೂ ಹತ್ತು ದಿನಗಳ ಕಾಲ ಈ ಜಾತ್ರೆ ಅಪಾರ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಜಾತ್ರೆ ಅಂಗವಾಗಿ ಬುಧವಾರ ರಥೋತ್ಸವ ನಡೆಯಿತು. ಜಲಧಿ ಉತ್ಸವ ನಿಮಿತ್ತ ಸಾವಿರಾರು ಭಕ್ತರು ಸೇರಿದರು. ಅವರು ದೇವಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು. ಪೂಜೆ ನಂತರ ಜಲಧಿ ನೀರನ್ನು ಹಾಕಿಸಿಕೊಳ್ಳಲು ಭಕ್ತರು ಮುಗಿಬಿದ್ದರು. ಉತ್ಸವ ಇಡೀ ರಾತ್ರಿ ನಡೆಯಿತು. ತಾಲ್ಲೂಕಿನ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಜಿಲ್ಲೆಯ ನಾನಾ ಮೂಲೆಗಳಿಂದ ಮತ್ತು ರಾಜ್ಯದ ಹಲವೆಡೆಯಿಂದಲೂ ಭಕ್ತರ ದಂಡು ಹರಿದು ಬಂದಿತು. ಇದರಿಂದ ಜಾತ್ರೆಯ ವೈಭವ ಹೆಚ್ಚಿತು.

ಗುರುವಾರ ಮಧ್ಯರಾತ್ರಿ ದೇವಿಯ ‘ಪಟ್ಟ’ ಕಾರ್ಯಕ್ರಮ ನಡೆಯಲಿದೆ. ಇದು ಜಾತ್ರೆಯ ಅತ್ಯಂತ ಮಹತ್ವದ ಕ್ಷಣವೆಂದು ಪರಿಗಣಿಸಲಾಗುತ್ತದೆ. ಈ ವೇಳೆ ದೇವಿ ಕಾರಣಿಕ ನುಡಿಯುತ್ತಾಳೆ. ಆ ಕಾರಣಿಕದಂತೆ ವರ್ಷಪೂರ್ತಿ ಘಟನೆಗಳು ನಡೆಯುತ್ತವೆ ಎಂಬ ಆಳವಾದ ನಂಬಿಕೆ ಈ ಭಾಗದ ಜನರಲ್ಲಿ ಇದೆ. ದೇವಿ ನುಡಿಯುವ ಕಾರಣಿಕದ ಆಧಾರದಲ್ಲಿ ಮಳೆ-ಬೆಳೆ, ಆರೋಗ್ಯ, ನೆಮ್ಮದಿ ಸೇರಿದಂತೆ ಜನಜೀವನದ ಶುಭಾಶುಭ ಊಹಿಸಲಾಗುತ್ತದೆ. ಈ ನಂಬಿಕೆ ತಲತಲಾಂತರಗಳಿಂದ ನಡೆದು ಬಂದಿದೆ. ಇದೇ ಕಾರಣಕ್ಕೆ ಸಾವಿರಾರು ಭಕ್ತರು ದೇವಿ ಕಾರಣಿಕವನ್ನು ಕೇಳಲು ಕುತೂಹಲದಿಂದ ಮಧ್ಯರಾತ್ರಿವರೆಗೂ ಕಾದಿರುತ್ತಾರೆ.

ಹತ್ತು ದಿನಗಳ ಕಾಲ ಈ ಮಹಾ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಭಾಗವಹಿಸುವ ಸಾವಿರಾರು ಭಕ್ತರಿಗೆ ನಿರಂತರ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ. ಸೇವಾಭಾವ ಮತ್ತು ಭಕ್ತಿಯ ಸಮನ್ವಯ ಜಾತ್ರೆಯ ಮತ್ತೊಂದು ವಿಶೇಷತೆಯಾಗಿದೆ. ಭಕ್ತಿ, ಪರಂಪರೆ, ನಂಬಿಕೆ ಮತ್ತು ಸಾಮೂಹಿಕ ಸೇವೆಯ ಸಂಗಮವಾಗಿರುವ ಕಾವಲ್ಲಮ್ಮನ ಜಲಧಿ ಜಾತ್ರೆ ಈ ಭಾಗದ ಸಾಂಸ್ಕೃತಿಕ ವೈಭವ ಮತ್ತೊಮ್ಮೆ ಅನಾವರಣಗೊಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-17-559174914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.