ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಶಿಷ್ಟ ಅಂತ್ಯಕ್ರಿಯೆಗಾಗಿ ಗ್ರಾಮ ಪಂಚಾಯಿತಿಯಿಂದ ನೀಡಿದ್ದ ಚೆಕ್‌ ಬೌನ್ಸ್‌

Published : 26 ಅಕ್ಟೋಬರ್ 2023, 13:26 IST
Last Updated : 26 ಅಕ್ಟೋಬರ್ 2023, 13:26 IST
ಫಾಲೋ ಮಾಡಿ
Comments

ಕೊರಟಗೆರೆ: ಪರಿಶಿಷ್ಟ ಜಾತಿ, ಪಂಗಡಕ್ಕೆ ಅಂತ್ಯಸಂಸ್ಕಾರಕ್ಕಾಗಿ ಗ್ರಾಮ ಪಂಚಾಯಿತಿಯಿಂದ ನೀಡಿರುವ ಚೆಕ್ ಹಣವಿಲ್ಲದೆ ಬೌನ್ಸ್‌ ಆಗಿದೆ.

ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯಿಂದ ನೀಡಿರುವ 50ಕ್ಕೂ ಹೆಚ್ಚು ಚೆಕ್‌ಗಳು ಬ್ಯಾಂಕ್‌ಗಳಿಗೆ ನೀಡಿದಾಗ ಬೌನ್ಸ್ ಆಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಅಂತ್ಯ ಸಂಸ್ಕಾರಕ್ಕಾಗಿ ನೀಡಿದ್ದ ಚೆಕ್‌ಗಳೂ ಸೇರಿವೆ. ಚೆಕ್‌ಬೌನ್ಸ್ ಪರಿಣಾಮ ಮೂರು ತಿಂಗಳಾದರೂ ಫಲಾನುಭವಿಗಳಿಗೆ ಹಣ ಸಂದಾಯವಾಗಿಲ್ಲ.

‘ಗ್ರಾಮ ಪಂಚಾಯಿತಿ ಹಣದಲ್ಲಿ ಶೇ 25ರಷ್ಟನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿಟ್ಟು, ಶಿಕ್ಷಣ, ಮೂಲ ಸೌಕರ್ಯ, ಸಾಮಾಜಿಕ ಸಬಲೀಕರಣ, ಅಂತ್ಯಕ್ರಿಯೆ ಹಾಗೂ ಇತರೆ ಅಭಿವೃದ್ಧಿಗಾಗಿ ಬಳಕೆ ಮಾಡಬೇಕು ಎಂಬ ನಿಯಮವಿದೆ. ಆದರೆ ಪಂಚಾಯಿತಿ ಹಣವನ್ನು ಸದ್ಬಳಕೆ ಮಾಡದ ಕಾರಣಕ್ಕೆ ಮೀಸಲು ಹಣವನ್ನು ಬಳಕೆ ಮಾಡಿರುವುದರಿಂದ ತುರ್ತು ಸಂದರ್ಭದಲ್ಲಿ ನೀಡಲು ಹಣ ಇಲ್ಲದೆ ಅಂತ್ಯ ಸಂಸ್ಕಾರ ಹಾಗೂ ಇತರೆ ಉದ್ದೇಶಗಳಿಗೆ ನೀಡಿರುವ ಚೆಕ್‌ ಬೌನ್ಸ್ ಆಗಿ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ಹಣ ಸಿಗದಂತಾಗಿದೆ’ ಎಂದು ಸದಸ್ಯ ರಾಜು ತಿಳಿಸಿದರು.

ಗ್ರಾಮ ಪಂಚಾಯಿತಿ ಖಾತೆಯಲ್ಲಿ ಹಣ ಇಲ್ಲದ ಕಾರಣಕ್ಕೆ ಕಚೇರಿಯಿಂದ ನೀಡಿರುವ ಹಲವು ಚೆಕ್‌ಗಳು ಬೌನ್ಸ್ ಆಗಿರುವ ಬಗ್ಗೆ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಸದಸ್ಯರಿಗೆ ಸಭೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಪಂಚಾಯಿತಿ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಸರಿಯಾಗಿ ಕೆಲಸ ನಿರ್ವಹಣೆ ಆಗುತ್ತಿಲ್ಲ. ನೌಕರರು ಸರಿಯಾಗಿ ಸದಸ್ಯರ ಮಾತು ಕೇಳುತ್ತಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಸದಸ್ಯ ಉದಯ್ ಬೇಸರ ವ್ಯಕ್ತಪಡಿಸಿದರು.

ಪ್ರತಿಕ್ರಿಯೆಗಾಗಿ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಕಾರ್ಯದರ್ಶಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು ಇಬ್ಬರು ಪ‍್ರತಿಕ್ರಿಯೆಗೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT