ಕೊರಟಗೆರೆ: ಭದ್ರತೆಯೇ ಇಲ್ಲದ ಆನ್ಲೈನ್ ಔಷಧ ಮಾರಾಟದ ವಿರುದ್ಧ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಲೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಔಷಧ ವ್ಯಾಪಾರಿಗಳ ಸಂಘವು ಬುಧವಾರ ಪ್ರತಿಭಟನೆ ನಡೆಸಿತು.

ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ಸಂಘದ ಸದಸ್ಯರು ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯೊಂದಿಗೆ ತೆರಳಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಕೆ.ಆರ್.ನಂಜುಂಡಶೆಟ್ಟಿ ಮಾತನಾಡಿ, ಆರೋಗ್ಯಕ್ಕೆ ಔಷಧ ಪೂರಕ ಆಗುವ ಬದಲು ಮಾರಕ ಆಗುತ್ತಿದೆ. ಆನ್ಲೈನ್ನಲ್ಲಿ ವಹಿವಾಟು ಆಗುವ ಔಷಧಿಗಳು ಯುವಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಹಾಗಾಗಿ ತಕ್ಷಣ ಭದ್ರತೆ ಇಲ್ಲದ ಆನ್ಲೈನ್ ಔಷಧ ಮಾರಾಟವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಸನ್ನಕುಮಾರ್ ಮಾತನಾಡಿ, ‘ಔಷಧ ವ್ಯಾಪಾರ ನಂಬಿ ಬದುಕುತ್ತಿರವ ನಮಗೆ ಆನ್ಲೈನ್ ಮೂಲಕ ಸಿಗುತ್ತಿರುವ ನಕಲಿ ಔಷಧಗಳಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಯುವ ಸಮೂಹ ಆನ್ಲೈನ್ನಲ್ಲಿ ಔಷಧಿ ಖರೀದಿಸುತ್ತಿರುವ ಸಂಖ್ಯೆ ಜಾಸ್ತಿಯಾಗುತ್ತಿದೆ. ವೈದ್ಯರ ಮಾರ್ಗದರ್ಶನ ಇಲ್ಲದೆ ಔಷಧ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದರು.

ಈಶಪ್ರಸಾದ್, ಕಾರ್ಯದರ್ಶಿ ಶಿವಶಂಕರ್, ಖಚಾಂಚಿ ದಿಲೀಪ್, ಸದಸ್ಯರಾದ ರಂಗಣ್ಣ, ಮಾರುತಿಕುಮಾರ್, ಉಮಾಜಗದೀಶ್, ಶಶಿಕುಮಾರ್, ಮೂರ್ತಿ, ನಾಗರಾಜು, ಸುಬೇತ್ಬಾಬು, ರಾಕೇಶ ಬಾಬು, ರಾಮು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-17-1301041873

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.