ಕೊರಟಗೆರೆ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಅನೇಕ ಕಡೆಗಳಲ್ಲಿ ಮನೆ, ವಿದ್ಯಾರ್ಥಿ ನಿಲಯ ಹಾಗೂ ಇತರೆ ಕಟ್ಟಡಗಳ ಶೌಚಾಲಯದ ನೀರನ್ನು ನೇರವಾಗಿ ತೆರೆದ ಚರಂಡಿಗಳಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಹಲವು ಜನವಸತಿ ಪ್ರದೇಶಗಳಲ್ಲಿ ದುರ್ವಾಸನೆಯೊಂದಿಗೆ ಜನರು ಬದುಕುವಂತಾಗಿದೆ.

ಪಟ್ಟಣದ ಹಲವು ಬಡಾವಣೆಗಳಲ್ಲಿ ಸಣ್ಣ ಚರಂಡಿಗಳ ಮೂಲಕ ತ್ಯಾಜ್ಯ ನೀರನ್ನು ದೊಡ್ಡ ಚರಂಡಿಗಳಿಗೆ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲವೆಡೆಗಳಲ್ಲಿ ಶೌಚಾಲಯದ ಮಲಿನ ನೀರನ್ನೇ ನೇರವಾಗಿ ಚರಂಡಿಗೆ ಬಿಡುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಪಟ್ಟಣದ ಶಿವಗಂಗಾ ಚಿತ್ರಮಂದಿರ ಸಮೀಪದಲ್ಲಿರುವ ಗುಂಡಾಂಜನೇಯ ದೇಗುಲದ ಜಾಗದ ಪಕ್ಕದ ದೊಡ್ಡ ಚರಂಡಿಗೆ ಹಲವು ಮನೆಗಳ ಶೌಚಾಲಯದ ನೀರು ಹರಿದು ಬರುತ್ತಿದೆ. ಗೋಕುಲ ಕೆರೆ ಪಕ್ಕದಿಂದ ವಿನಾಯಕ ನಗರ ಮೂಲಕ ಸಾಗುವ ದೊಡ್ಡ ಚರಂಡಿಗೂ ಅನೇಕ ಕಡೆಗಳಿಂದ ಮಲಿನ ನೀರನ್ನು ಬಿಡಲಾಗುತ್ತಿದೆ.

ವಿನಾಯಕನಗರಕ್ಕೆ ಹೊಂದಿಕೊಂಡಿರುವ ವಿದ್ಯಾರ್ಥಿ ನಿಲಯವೊಂದರ ಶೌಚಾಲಯದ ನೀರನ್ನು ನೇರವಾಗಿ ದೊಡ್ಡ ಚರಂಡಿಗೆ ಹರಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಆ ಭಾಗದಲ್ಲಿ ಹರಿಯುವ ತೆರೆದ ಚರಂಡಿಯಿಂದ ತೀವ್ರ ದುರ್ವಾಸನೆ ಬೀರುತ್ತಿದ್ದು, ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.

‘ಮಳೆಗಾಲದಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರವಾಗುತ್ತದೆ. ಚರಂಡಿ ನೀರು ರಸ್ತೆಗಳ ಮೇಲೆಯೇ ಹರಿದುಬರುತ್ತದೆ. ಸೊಳ್ಳೆಗಳ ಕಾಟ ಹೆಚ್ಚುತ್ತಿದೆ’ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಪಟ್ಟಣದ ಬಹುತೇಕ ಚರಂಡಿ ತ್ಯಾಜ್ಯ ಅಂತಿಮವಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಸುವರ್ಣಮುಖಿ ನದಿಯನ್ನು ಸೇರುತ್ತಿದೆ. ಯಾವುದೇ ಶುದ್ಧೀಕರಣ ವ್ಯವಸ್ಥೆಯಿಲ್ಲದೆ ಮಲಿನ ನೀರನ್ನು ನದಿಗೆ ಹರಿಬಿಡುತ್ತಿರುವುದರಿಂದ ನದಿ ತೀವ್ರ ಮಾಲಿನ್ಯಕ್ಕೆ ಒಳಗಾಗುತ್ತಿದೆ. ನದಿ ಪಾತ್ರದ ಸುತ್ತ ವಾಸಿಸುವ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ. ಮುಂದಿನ ಗ್ರಾಮಗಳಿಗೆ ಹರಿಯುವ ನೀರಿನ ಗುಣಮಟ್ಟಕ್ಕೂ ಇದರಿಂದ ಹಾನಿಯಾಗುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪುರಸಭೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ, ಶೌಚಾಲಯದ ನೀರನ್ನು ನೇರವಾಗಿ ಚರಂಡಿಗೆ ಬಿಡುತ್ತಿರುವ ಸಂಪರ್ಕಗಳನ್ನು ತೆರವುಗೊಳಿಸಿ, ಸೂಕ್ತ ಒಳಚರಂಡಿ ಹಾಗೂ ತ್ಯಾಜ್ಯ ನೀರು ಶುದ್ಧೀಕರಣ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-17-1382835595

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.