ಕೊರಟಗೆರೆ: ಕೋಳಾಲ ಹೋಬಳಿಯ ಕಂತೆವಡೇರಹಳ್ಳಿ ಬಳಿ ಆಸ್ತಿ ಹಂಚಿಕೆವಿಚಾರವಾಗಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ತಾಲ್ಲೂಕಿನ ಊರ್ಡಿಗೆರೆ ಹೋಬಳಿ ದೊಡ್ಡತಿಮ್ಮಯ್ಯನಪಾಳ್ಯದ ಬೈಲಹನುಮಯ್ಯ (36) ಕೊಲೆಯಾದವರು. ವಿಷ್ಣುಕುಮಾರ್ (38) ಬಂಧಿತ ಆರೋಪಿ. ಇವರ ತಂದೆಗೆ ನಾಲ್ಕು ಎಕರೆ ಜಮೀನು, 2 ಬೊಲೆರೊ ವಾಹನಗಳಿವೆ. ಆಸ್ತಿ ಹಂಚಿಕೆ ವಿಚಾರವಾಗಿ ಪದೇ ಪದೇ ಗಲಾಟೆಗಳು ನಡೆಯುತ್ತಿದ್ದವು.

ಮೇ 25ರಂದು ರಾತ್ರಿ ಜಮೀನು ಹಂಚಿಕೆಗಾಗಿ ಮಾತುಕತೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದರು. ವಿಷ್ಣುಕುಮಾರ್ ಚಾಕು, ದೊಣ್ಣೆಯಿಂದ ಬೈಲಹನುಮಯ್ಯ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಬೈಲಹನುಮಯ್ಯ ಮೃತಪಟ್ಟಿದ್ದರು. ಈ ಕುರಿತು ಮೇ 26ರಂದು ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ತಂಡ ಆರೋಪಿಯನ್ನು ಬಂಧಿಸಿದೆ.

‘ಕೊರಟಗೆರೆ ಇನ್ಸ್ಪೆಕ್ಟರ್ ಪುರುಷೋತ್ತಮ್, ಕೋಳಾಲ ಪಿಎಸ್ಐ ಎಸ್.ಆರ್.ಅಭಿಷೇಕ್, ಸಿಬ್ಬಂದಿ ಬಿ.ಎಲ್.ಮಧುಕುಮಾರ್, ಎ.ವಿ.ಪ್ರಕಾಶ್ ಅವರ ತಂಡ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-17-1302475525

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.