ಪ್ರಜಾವಾಣಿ ವಾರ್ತೆ

ತುಮಕೂರು: ಕರ್ತವ್ಯ ಲೋಪ, ಭ್ರಷ್ಟಾಚಾರ ಆರೋಪದ ಮೇಲೆ ಪಾವಗಡ ತಾಲ್ಲೂಕು ಕೋಟಗುಡ್ಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಭವ್ಯ ಹಾಗೂ ಕೋಟಗುಡ್ಡ ಗ್ರಾ.ಪಂ ಹಿಂದಿನ ಅಭಿವೃದ್ಧಿ ಅಧಿಕಾರಿ, ಹಾಲಿ ಪೊನ್ನಸಮುದ್ರ ಗ್ರಾ.ಪಂ ಪಿಡಿಒ ಶಿವಾನಂದ ಸಾತಿಹಾಳ ಅವರನ್ನು ಅಮಾನತು ಮಾಡಲಾಗಿದೆ.

ಮೇಲು ನೋಟಕ್ಕೆ ಕರ್ತವ್ಯ ಲೋಪ, ಹಣ ದುರುಪಯೋಗ ಮಾಡಿಕೊಂಡಿರುವುದು ಕಂಡು ಬಂದಿದೆ. ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಅಶ್ವಿಜ ಆದೇಶಿಸಿದ್ದಾರೆ.

ಇಬ್ಬರು ಅಧಿಕಾರಿಗಳು ಹಣ ದುರುಪಯೋಗ ಮಾಡಿಕೊಂಡಿರುವುದು ಪತ್ತೆಯಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ ವಿದ್ಯುತ್ ಬಿಲ್ ಪಾವತಿಗೆ ನಿಗದಿಪಡಿಸಿದ್ದ ಹಣದಲ್ಲಿ ಸಾಮಗ್ರಿ ಖರೀದಿ, ಸ್ವಚ್ಛತೆಗಾರರಿಗೆ ವೇತನ ನೀಡದಿರುವುದು, ಕಸ ಸಂಗ್ರಹಿಸಿರುವ ವಾಹನಕ್ಕೆ ಇಂಧನ ತುಂಬಿಸುವುದು, ಕಸ ಸಂಗ್ರಹಣಾ ಸಿಬ್ಬಂದಿಗೆ ವೇತನ ಪಾವತಿಸದೆ ಸಾಮಗ್ರಿ ಖರೀದಿಸಲಾಗಿದೆ. ಎಸ್ಸಿಎಸ್ಪಿ, ಟಿಎಸ್ಪಿ ಅನುದಾನದಲ್ಲೂ ಸಾಮಗ್ರಿ ಖರೀದಿ ಮಾಡಲಾಗಿದೆ. ಪಂಪು, ಮೋಟರ್ ಇತರೆ ಸಾಮಗ್ರಿಗಳ ಲೆಕ್ಕವೇ ಇಲ್ಲವಾಗಿದೆ. ಸಂಗ್ರಹಿಸಿದ್ದ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸದಿರುವುದು ಕಂಡು ಬಂದಿದೆ.

ಅನುದಾನದ ಬಹುತೇಕ ಹಣವನ್ನು ಸಾಮಗ್ರಿ ಖರೀದಿಗೆ ಬಳಕೆ ಮಾಡಿರುವುದು. ಅದರಲ್ಲೂ ಒಂದೇ ಸಂಸ್ಥೆಯಿಂದ ಖರೀದಿಸಿರುವುದು ತನಿಖೆ ಸಮಯದಲ್ಲಿ ಗೊತ್ತಾಗಿದೆ. ಈ ಬಗ್ಗೆ ನೀಡಿದ ನೋಟಿಸ್ಗೂ ಭವ್ಯ ಹಾಗೂ ಶಿವಾನಂದ ಸಾತಿಹಾಳ ವಿವರಣೆ ನೀಡಿಲ್ಲ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.