ಗುರುವಾರ , ಡಿಸೆಂಬರ್ 12, 2019
19 °C

ಚಿಲ್ಲರೆ ವಿಷಯ: ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ ಕೆಎಸ್‌ಆರ್‌ಟಿಸಿ ನಿರ್ವಾಹಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಚಿಲ್ಲರೆ ಕೇಳಿದ್ದೇ ನೆಪ ಮಾಡಿಕೊಂಡು ಪ್ರಯಾಣಿಕನ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ ರಕ್ತ ಸುರಿಯುಂತೆ ಹಲ್ಲೆ ನಡೆಸಿದ್ದಾರೆ.

ಕೊರಟಗೆರೆ ತಾಲ್ಲೂಕು ನಾಗೇನಹಳ್ಳಿ ಸಮೀಪ ಘಟನೆ ನಡೆದಿದೆ. ಪ್ರಯಾಣಿಕ ಕೊರಟಗೆರೆಯಲ್ಲಿ ಹತ್ತಿ ನೆಲಮಂಗಲ ತಾಲ್ಲೂಕು ಮಾದನಾಯಕನಹಳ್ಳಿಗೆ ಟಿಕೆಟ್‌ ಪಡೆದಿದ್ದರು. ಟಿಕೆಟ್‌ ಪಡೆದು ಬಾಕಿ ಹಣವನ್ನು ನೀಡುವಂತೆ ಪ್ರಯಾಣಿಕ ನಿರ್ವಾಹನನನ್ನು ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ.

ಮೂರ್ನಾಲ್ಕು ಬಾರಿ ಚಿಲ್ಲರೆ ಕೊಡುವಂತೆ ಕೇಳಿದ್ದು, ಇದರಿಂದ ಕುಪಿತಗೊಂಡ ಕಂಡಕ್ಟರ್‌ ಟಿಕೆಟ್‌ ನೀಡುವ ಯಂತ್ರದಿಂದ ಪ್ರಯಾಣಿಕನ ತೆಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಆಗ ಪ್ರಯಾಣಿಕನ ತಲೆಯಿಂದ ರಕ್ತ ಸುರಿದಿದೆ. ಸಹ ಪ್ರಯಾಣಿಕರು ಆಕ್ರೋಶಗೊಂಡು ನಿರ್ವಾಹಕನನ್ನು ಕೆಳಗಿಳಿಸಿ ಥಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು