ಬೆಂಗಳೂರು: ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಅನ್ಯಾಯ ಎಸಗಿದ್ದು, ಇದನ್ನು ಖಂಡಿಸಿ ಮೇ 19ರಂದು ತುಮಕೂರಿನಲ್ಲಿ ನಡೆಯುವ ಸರ್ಕಾರದ ಸಾಧನಾ ಸಮಾವೇಶದ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹೇಳಿದೆ.

ಜಂಟಿ ಕ್ರಿಯಾ ಸಮಿತಿಯು ಶುಕ್ರವಾರ ಆಯೋಜಿಸಿದ್ದ ನಾಲ್ಕು ಸಾರಿಗೆ ನಿಗಮಗಳ ನೌಕರರ ಮುಷ್ಕರ ಸಿದ್ಧತಾ ಸಮಾವೇಶದಲ್ಲಿ ಮಾತನಾಡಿದ ಬಿ. ಜಯದೇವರಾಜೇ ಅರಸ್ ಮತ್ತು ಡಿ.ಎ. ವಿಜಯ ಭಾಸ್ಕರ ಅವರು, ಮೇ 20ರಿಂದ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.

‘ನಾವು ಮುಷ್ಕರಕ್ಕೆ ಕರೆ ನೀಡಿರುವು ದರಿಂದ ಸರ್ಕಾರ ಸಾಧನಾ ಸಮಾವೇಶ ವನ್ನು ಮೇ 20ರ ಬದಲು ಮೇ 19ರಂದು ನಡೆಸಲು ನಿರ್ಧರಿಸಿದೆ. ನಾವು ಮುಷ್ಕರದ ದಿನಾಂಕ ಬದಲಿಸುವುದಿಲ್ಲ. ನಿಮ್ಮ ಸಾಧನೆ ನಮ್ಮ ನೌಕರರಿಗೆ ಕಣ್ಣೀರು ತರಿಸಿದೆ. ಅದಕ್ಕಾಗಿ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’ ಎಂದರು.

‘ನೌಕರರು ಮುಷ್ಕರದ ದಿನ ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲಿದ್ದರೆ ಮುಷ್ಕರ ಯಶಸ್ವಿಯಾಗಲಿದೆ’ ಎಂದರು.

‘ಮೂಲ ವೇತನವನ್ನು ಶೇ 25ರಷ್ಟು ಹೆಚ್ಚಿಸಬೇಕು ಎಂಬುದು ನಮ್ಮ ಬೇಡಿಕೆಆಗಿತ್ತು. ಆದರೆ, ಏಕಾಏಕಿ ಶೇ 12.5ರಷ್ಟು ಹೆಚ್ಚಳ ಮಾಡಿ, ಇದು ಅಂತಿಮ ಎಂದು ಹೇಳಿರುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ. 2024ರ ಜನವರಿ 1ರಿಂದ ಅನ್ವಯವಾಗ ಬೇಕು ಎಂದು ಹೇಳಿದ್ದರೂ 2025 ರಿಂದ ಅನ್ವಯವಾಗುವಂತೆ ಏರಿಕೆ ಮಾಡಿರುವು ದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಜಂಟಿ ಕ್ರಿಯಾ ಸಮಿತಿಯ ಮುಖಂಡರಾದ ವೆಂಕಟರವಣಪ್ಪ, ಮೋಹನ್ ರಾಜ್, ಗಂಡಸಿ ಸದಾನಂದಸ್ವಾಮಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-4-314316158

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.