ಕುಣಿಗಲ್: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬೆಟ್ಟದ ರಂಗನಾಥಸ್ವಾಮಿ ಮೊದಲ ವರ್ಷದ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಬೆಟ್ಟದ ಸುತ್ತಲಿನ 21 ಗ್ರಾಮ ದೇವತೆಗಳನ್ನು ಉತ್ಸವದ ಮೂಲಕ ಸನ್ನಿಧಿಗೆ ಕರೆತರಲಾಗಿದ್ದು, ಸ್ವಾಮಿಗೆ ಬೆಳಿಗ್ಗೆಯಿಂದ ವಿಶೇಷ ಅಲಂಕಾರ, ಪೂಜೆ ನಡೆಯಿತು.

ಧಾರ್ಮಿಕ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಸಿ.ಎನ್.ಮಂಜುನಾಥ್ ಮಾತನಾಡಿ, ಐದು ಶತಮಾನಗಳ ಇತಿಹಾಸವಿರುವ ರಂಗನಾಥ ಸ್ವಾಮಿ ಕ್ಷೇತ್ರ ಲಕ್ಷಾಂತರ ಭಕ್ತ ಸಮೂಹ ಹೊಂದಿದ್ದು, ಬಾಗಿಲೇ ಇಲ್ಲದ ದೇವಾಲಯವಾಗಿದೆ. ನೂರಾರು ವರ್ಷಗಳ ಹಿಂದೆ ಜನರ ಬದುಕಿನಲ್ಲಿ ನಂಬಿಕೆ, ಪ್ರಾಮಾಣಿಕತೆ, ಧರ್ಮನಿಷ್ಟೆ ಹೆಚ್ಚಾಗಿದ್ದು, ಮನೆಗಳಿಗೆ ಬಾಗಿಲುಗಳ ಅಗತ್ಯವಿರಲ್ಲಿಲ್ಲ. ಇಂದು ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳಿದ್ದರೂ, ಕಳ್ಳತನವನ್ನು ಸಂಪೂರ್ಣವಾಗಿ ತಡೆಯಲು ಸಾದ್ಯವಾಗಿಲ್ಲ. ಇದು ಸಮಾಜದಲ್ಲಿ ನೈತಿಕ ಮೌಲ್ಯಗಳ ಮಹತ್ವ ನೆನಪಿಸುತ್ತದೆ. ಶ್ರೀರಂಗ ಗ್ರೂಪ್ನ ರಾಮಕೃಷ್ಣ ರಂಗನಾಥನ ಕೃಪೆಯಿಂದ ಗಳಿಸಿದ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಿಸಿ, ಸಾರ್ಥಕ ಮನೋಭಾವ ಪಡೆದಿದ್ದಾರೆ ಎಂದರು.

ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಹಂಗರಹಳ್ಳಿ ವಿದ್ಯಾ ಚೌಡೇಶ್ವರಿ ಮಠದ (ಶೃಂಗೇರಿ ಪೀಠ) ವಿದ್ಯಾನಂದ ಸ್ವಾಮೀಜಿ, ಶ್ರೀರಂಗ ಗ್ರೂಪ್ನ ರಾಮಕೃಷ್ಣ, ವಸಂತಕುಮಾರ್, ಸಿಪಿಐ ಮಾದ್ಯಾ ನಾಯಕ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಕರವೇ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಮಾರುತಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-17-286512811

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.