ಕುಣಿಗಲ್: ಭಗೀರತ ಉಪ್ಪಾರ ಧಾರ್ಮಿಕ ಟ್ರಸ್ಟ್, ಕೊಲ್ಲಾಪುರದಮ್ಮ ಸೇವಾ ಸಮಿತಿ ಆಶ್ರಯದಲ್ಲಿ ಭಗೀರತ ಜಯಂತಿಯನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಉಮೇಶ್ ಮಾತನಾಡಿ, ತನ್ನ ಪಿತೃಗಳ ಸಾಕ್ಷತ್ಕಾರಕ್ಕಾಗಿ ಭಗೀರಥ ಘೋರ ತಪಸ್ಸು ಮಾಡಿ ಗಂಗೆಯನ್ನೆ ಧರೆಗೆ ತಂದರು. ಅದೇ ರೀತಿ ಉಪ್ಪಾರ ಜನಾಂಗದವರು ಹಿರಿಯನ್ನು ಗೌರವಿಸುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರಬೇಕಿದೆ. ಮಹನೀಯರ ಜಯಂತಿ ಆಚರಣೆಗೂ ಮುನ್ನ ಅವರ ಜೀವನದ ಸಾಧನೆಗಳನ್ನು ಅರಿಯಬೇಕಿದೆ, ಆದರ್ಶಗಳನ್ನು ಪರಿಪಾಲನೆ ಮಾಡಬೇಕಿದೆ ಎಂದರು.

ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿಪುಲ ಅವಕಾಶಗಳಿದ್ದರೂ, ಯುವ ಜನತೆಗೆ ಶೈಕ್ಷಣಿಕ ಪ್ರಗತಿಗೆ ಅಗತ್ಯವಾಗಿ ಬೇಕಾದುದು ಮಾರ್ಗದರ್ಶನ. ಮಾಹಿತಿಯ ಕೊರತೆಯಿಂದಾಗಿ ಯಶಸ್ಸು ಸಾಧಿಸಲಾಗಿಲ್ಲ ಮತ್ತೂ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.

ಮುನ್ನ ಭಗೀರಥ ಮಹಾರಾಜರ ಭಾವಚಿತ್ರವನ್ನು ಅದ್ದೂರಿ ಮೆರವಣಿಗೆಯಲ್ಲಿ ಕರೆತರಲಾಯಿತು. ಜನಾಂಗದ ಹಿರಿಯ ಮಹಿಳೆಯರು, ಪುರುಷರು ಮತ್ತು ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ಸಮಿತಿಯ ಅಧ್ಯಕ್ಷ ಚಾಮಣ್ಣ, ಪದಾಧಿಕಾರಿಗಳಾದ ಶಂಭುರಾಮಣ್ಣ, ಶ್ರೀನಿವಾಸ್ ಮೂರ್ತಿ, ವೆಂಕಟೇಶ, ವಿಶ್ವೇಶ್ವರಯ್ಯ, ಧನಂಜಯ್ಯ, ಮಾರುತಿ, ರೇಣುಕ ಪ್ರಸಾದ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-17-677746812

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.