ಕುಣಿಗಲ್: ತಾಲ್ಲೂಕಿನ ಬಿಳಿದೇವಾಲಯದ ಪರಿಶಿಷ್ಟರ ಕಾಲೊನಿಗೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯಿತಿಗೆ ಸೇರಿರುವ ಮಳಿಗೆಗಳ ಬೀಗ ಒಡೆದು ಕೆಲವರು ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಆರೋಪಿಸಿದೆ.

ಅತಿಕ್ರಮ ಪ್ರವೇಶ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡು, ಮಳಿಗೆಗಳನ್ನು ಗ್ರಾಮ ಪಂಚಾಯಿತಿ ವಶಕ್ಕೆ ಪಡೆಯಬೇಕು. ಅದೇ ಜಾಗದಲ್ಲಿ ಗ್ರಂಥಾಲಯ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು ಎಂದು ಒಕ್ಕೂಟದ ಪದಾಧಿಕಾರಿಗಳಾದ ದಲಿತ್ ನಾರಾಯಣ್ ವಿ., ಶಿವಶಂಕರ್, ಜೈಕುಮಾರ್, ಶ್ರೀನಿವಾಸ್, ರಾಜು ಎಸ್.ಟಿ. ಆಗ್ರಹಿಸಿದ್ದಾರೆ

ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಬುಧವಾರ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕಸಬಾ ಹೋಬಳಿ ಬೋರಲಿಂಗನ ಪಾಳ್ಯದಲ್ಲಿ ಪರಿಶಿಷ್ಟ ಜಾತಿಗಳ ವಸತಿ ಉದ್ದೇಶಕ್ಕಾಗಿ ಎರಡು ಎಕರೆ 37 ಗುಂಟೆ ಜಮೀನು ಮುಂಜೂರು ಮಾಡಲಾಗಿತ್ತು.

ಅದರಲ್ಲಿ ದಲಿತರು ಮನೆಗಳನ್ನು ಕಟ್ಟಿಕೊಂಡು ಉಳಿಕೆ ಜಾಗದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ನಿರ್ಮಿಸಲಾಗಿತ್ತು. ಇ– ಖಾತೆಯನ್ನೂ ಮಾಡಲಾಗಿತ್ತು. ಹೊಸ ಗ್ರಾಮ ಪಂಚಾಯಿತಿ ಕಚೇರಿ ನಿರ್ಮಾಣದ ನಂತರ ಅಂಗನವಾಡಿ ಕೇಂದ್ರಕ್ಕೆ ಬಿಟ್ಟುಕೊಡಲಾಗಿತ್ತು. ಹೊಸ ಅಂಗನವಾಡಿ ನಿರ್ಮಾಣದ ನಂತರ ಕಟ್ಟಡ ಶಿಥಿಲವಾಗಿದೆ ಎಂದರು.

ಶಿಥಿಲವಾದ ಕಟ್ಟಡವಾಗಿದ್ದ ಹಳೆಯ ಗ್ರಾಮ ಪಂಚಾಯಿತಿ ಕಟ್ಟಡವನ್ನು ಕೆಲವರು ರಾತ್ರೋರಾತ್ರಿ ಏಕಾಏಕಿ ಕೆಡವಿ ಮಳಿಗೆಗಳನ್ನ ನಿರ್ಮಿಸಿಕೊಂಡಿದ್ದರು. ಸಾರ್ವಜನಿಕರಿಂದ ದೂರು ಬಂದ ನಂತರ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಶಕ್ಕೆ ಪಡೆದು ಬೀಗ ಹಾಕಿದ್ದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ ಕಾಲೊನಿ ಪಕ್ಕದಲ್ಲಿರುವ ಹಳೆಯ ಮಳಿಗೆಗಳನ್ನು ಕೆಲವರು ಕಬಳಿಸಲು ಯತ್ನಿಸಿದಾಗ ಗ್ರಾಮ ಪಂಚಾಯಿತಿಯವರು ವಶಕ್ಕೆ ಪಡೆದು ಬೀಗ ಹಾಕಲಾಗಿತ್ತು. ಮತ್ತೆ ಅವರೆ ಬೀಗ ಒಡೆದು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಸರ್ಕಾರಿ ಆಸ್ತಿಯನ್ನು ಕಬಳಿಸುವುದು ಕಾನೂನು ಬಾಹಿರ. ಬಿಟ್ಟುಕೊಡದಿದ್ದರೆ ಶೀಘ್ರವೇ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಸರ್ಕಾರಿ ಆಸ್ತಿಯನ್ನು ವಶಕ್ಕೆ ಪಡೆಯಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಆನಂದ್ ಸ್ವಾಮಿ ರಮೇಶ, ದೇವರಾಜು, ರಾಜು, ಮಲ್ಲೇಶ್, ಲೋಕೇಶ್, ತಿಮ್ಮಪ್ಪ, ನಾಗರಾಜು, ಗರುಡರಂಗಯ್ಯ, ಲಕ್ಕಮ್ಮ, ಗೌರಮ್ಮ, ಲಲಿತಮ್ಮ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-17-1517751597

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.