ಕುಣಿಗಲ್: ಪಟ್ಟಣದಲ್ಲಿರುವ ಪ್ರಯಾಣಿಕರ ತಂಗುದಾಣಗಳು ಅವ್ಯವಸ್ಥೆಯ ಆಗರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.

ಪಟ್ಟಣದಲ್ಲಿ 35 ವರ್ಷಗಳ ಹಿಂದೆ ಪುರಸಭೆ ಬಸ್ ನಿಲ್ದಾಣದಲ್ಲಿ ರೋಟರಿ ಕ್ಲಬ್ ಮತ್ತು ಧಾನ್ಯವರ್ತಕರ ಸಂಘದಿಂದ ತಂಗುದಾಣ ನಿರ್ಮಿಸಲಾಗಿತ್ತು. ಈಚೆಗೆ ನೂತನ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭವಾಗುವವರೆಗೆ ಬಳಕೆಯಾಗುತ್ತಿತ್ತು.

ಡಿ. ನಾಗರಾಜಯ್ಯ ಶಾಸಕರಾಗಿದ್ದಾಗ ಪುರಸಬೆ ಬಸ್ ನಿಲ್ದಾಣ ಮುಂಭಾಗ ಮತ್ತು ಕೆನರಾ ಬ್ಯಾಂಕ್ ಬಳಿ ಶಾಸಕರ ಅನುದಾನದಲ್ಲಿ ಎರಡು ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿತ್ತು. ಬೆಂಗಳೂರು- ಹಾಸನ ಮಾರ್ಗವಾಗಿ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು.

2018ರ ವಿಧಾಸಭೆ ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಜಾರಿಯಾದ ಸಮಯದಲ್ಲಿ ಪ್ರಯಾಣಿಕರ ತಂಗುದಾಣಕ್ಕೆ ಅಳವಡಿಸಲಾದ ಶಾಸಕರ ಹೆಸರನ್ನು ತೆಗೆಯುವ ಸಮಯದಲ್ಲಿ ತಂಗುದಾಣಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಪಾರದರ್ಶಕ ಫಲಕವನ್ನು ತೆರವುಮಾಡಿದ ಪರಿಣಾಮ ತಂಗುದಾಣಗಳು ಅಂದ ಕಳೆದುಕೊಂಡು ನಿಸ್ತೇಜವಾಗಿವೆ.

ಪುರಸಭೆಯಿಂದ ಇತ್ತೀಚೆಗೆ ಬಿಜಿಎಸ್ ಶಾಲೆ ಬಳಿ ₹10 ಲಕ್ಷ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣ ಹೆಸರಿಗಷ್ಟೆ ನಿರ್ಮಾಣವಾಗಿದ್ದರೂ, ವಿದ್ಯುತ್ ಸಂಪರ್ಕ ದೀಪಗಳ ವ್ಯವಸ್ಥೆ ಇಲ್ಲ. ಅಳವಡಿಸಿರುವ ಅಸನ ವ್ಯವಸ್ಥೆಗಳು ಹಾಳಾಗಿವೆ. ಸ್ವಚ್ಛತೆಯೂ ಮಾಯವಾಗಿ, ಬಳಕೆಯಾಗುವ ಮುನ್ನವೇ ಶಿಥಿಲಗೊಂಡಿದೆ. ಪುರಸಭೆಯವರು ಗಮನಹರಿಸುವಲ್ಲಿ ವಿಫಲರಾಗಿದ್ದಾರೆ. ಹಗಲು ಧೂಮಪಾನಿಗಳಿಗೆ, ರಾತ್ರಿ ಮದ್ಯಸೇವನೆಗೆ ಮಾತ್ರ ಬಳಕೆಯಾಗುತ್ತಿದೆ.

ಪಟ್ಟಣದ ಮದ್ದೂರು ರಸ್ತೆ ಮತ್ತು ತುಮಕೂರು ರಸ್ತೆಯಲ್ಲಿ ಪ್ರಯಾಣಿಕರ ತಂಗುದಾಣದ ಅಗತ್ಯವಿದ್ದು ನಿರ್ಮಾಣದ ಬಗ್ಗೆ ಪುರಸಭೆಯಲ್ಲಿ ಚರ್ಚೆಗಳು ಮಾತ್ರ ನಡೆದಿವೆ. ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಪಟ್ಟಣದ ಬೇಗೂರು ಕ್ರಾಸ್ ಬಳಿ ಮಾಜಿ ಸಂಸದ ಡಿ.ಕೆ.ಸುರೇಶ ಅವರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಿದ್ದರೂ, ಕಾಮಗಾರಿ ಅಪೂರ್ಣವಾಗಿದೆ.

ಪ್ರಯಾಣಿಕರ ತಂಗುದಾಣಗಳು ಪ್ರಯಾಣಿಕರ ಬಳಕೆಗಿಂತಲೂ, ಪ್ರಚಾರ ಫಲಕ, ಪೋಸ್ಟರ್, ಬ್ಯಾನರ್ ಕಟ್ಟಲು ಮಾತ್ರ ಹೆಚ್ಚು ಬಳಕೆಯಾಗುತ್ತಿವೆ.

ಪಟ್ಟಣದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಬಿಸಿಲಿನ ಝಳ (ತಾಪಮಾನ) ಹೆಚ್ಚಾಗಿದ್ದು, ನಿತ್ಯ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ತಂಗುದಾಣ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸುವಂತೆ ಕರವೇ ಅಧ್ಯಕ್ಷ ಮಂಜುನಾಥ್, ಟೌನ್ ಸಹಕಾರ ಸಂಘದ ನಿರ್ದೇಶಕ ಮಾರುತಿ, ಸೇವಾ ಭಾಗ್ಯ ಫೌಂಡೇಶನ್ ಪದಾಧಿಕಾರಿಗಳಾದ ವಿನೋದ್, ಪದ್ಮನಾಭ್, ನಾರಾಯಣ, ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-17-485883967

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.