ಕುಣಿಗಲ್: ಪಟ್ಟಣದ ಬಿಜಿಎಸ್ ನಗರಕ್ಕೆ ಕಳೆದ ಹದಿನೈದು ದಿನದಿಂದ ಪುರಸಭೆಯಿಂದ ನೊರೆಭರಿತ, ದುರ್ವಾಸನೆಯಿಂದ ಕೂಡಿದ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜಿಎಸ್ ನಗರದಲ್ಲಿ ಇನ್ನೂರಕ್ಕೂ ಹೆಚ್ಚು ಮನೆಗಳಿದ್ದು, ಎರಡು ಕೊಳವೆಬಾವಿಗಳಿಂದ ಕುಡಿಯುವ ನೀರು ವಿತರಣೆಯಾಗುತ್ತಿದೆ. ಕೆಲದಿನಗಳಿಂದ ನೊರೆ ಭರಿತ, ದುರ್ವಾಸನೆಯುಕ್ತ ನೀರು ವಿತರಣೆಯಾಗುತ್ತಿದ್ದು, ಕುಡಿಯುಲು ಯೋಗ್ಯವಾಗಿಲ್ಲ. ಹಾಗಾಗಿ ಕುಡಿಯುವ ನೀರಿಗಾಗಿ ಸಮೀಪದ ತೋಟಗಳ ಕೊಳವೆಬಾವಿಗಳಿಗೆ ಹೋಗಬೇಕಾದ ಅನಿವಾರ್ಯವಿದೆ ಎಂದು ದೂರಿದ್ದಾರೆ.

ಕುಲುಷಿತ ನೀರು ವಿತರಣೆ ಜತೆಗೆ ಅಸಮರ್ಪಕ ನೀರಿನ ವಿತರಣೆಯಾಗುತ್ತಿರುವುದರಿಂದ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಕೆ.ಬಿ.ಕುಮಾರ್, ಗಣೇಶ್, ಕಾಳಮ್ಮ ಲಕ್ಷ್ಮೀರಾಜೇಂದ್ರ ಮತ್ತು ಲಕ್ಷ್ಮಮ್ಮ ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-17-41834240

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.