ಕುಣಿಗಲ್: ‘ಹಿಂದೂ ಧರ್ಮದ ಪ್ರತೀಕವಾದ ದೇವಸ್ಥಾನಗಳು ಶ್ರದ್ಧಾ– ಭಕ್ತಿಯ ಕೇಂದ್ರಗಳಾಗಿದ್ದು, ಮಾನಸಿಕ ಶಾಂತಿ, ನೆಮ್ಮದಿಯ ತಾಣಗಳಾಗಿರುವುದರಿಂದ ಅವುಗಳ ಪಾವಿತ್ರ್ಯ ಸಂರಕ್ಷಣೆಯ ಹೊಣೆಗಾರಿಕೆ ಸಮಸ್ತ ಭಕ್ತರ ಮೇಲಿದೆ’ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಪಟ್ಟಣದ ನರಸಿಂಹಸ್ವಾಮಿ ದೇಗುಲದಲ್ಲಿ ಶನಿವಾರ ನಡೆದ ನರಸಿಂಹ ಜಯಂತಿಯಲ್ಲಿ ಮಾತನಾಡಿದರು.

ದೇವಾಲಯಗಳು ಸನಾತನ ಸಂಸ್ಕೃತಿ, ಸಂಸ್ಕಾರಗಳ ಅವಿಭಾಜ್ಯ ಅಂಗ. ಭಕ್ತರು ದೇವಾಲಯಗಳಿಗೆ ಹೋಗಿ ಕೈಲಾದ ಪೂಜೆ ಸಲ್ಲಿಸಿ ಅವುಗಳ ಪಾವಿತ್ರತೆ ಅರಿತು ಉಳಿಸಿ ಬೆಳೆಸುವ ಜೊತೆಯಲ್ಲಿ ಅವುಗಳ ಸಂರಕ್ಷಣೆ ಮತ್ತು ವ್ಯವಸ್ಥಿತ ನಿರ್ವಹಣೆಗೂ ಕ್ರಮ ಕೈಗೊಳ್ಳಬೇಕಿದೆ. ದೇವಾಲಯಗಳಲ್ಲಿ ನಿತ್ಯ ಪೂಜೆ ನಡೆಯುವ ಜೊತೆಯಲ್ಲಿ ಭಕ್ತರು ಸಹ ನಿತ್ಯ ದೇವಾಲಯಕ್ಕೆ ಭೇಟಿ ನೀಡಿ ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿಗಳನ್ನು ಆಚರಿಸಿ ಪಾಲಿಸಿ ಅನುಸರಿಸಿಕೊಂಡು ಬರುವ ಮೂಲಕ ದೇವಾಲಯ ಸಂಸ್ಕೃತಿ ರಕ್ಷಣೆ ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ದೇವಸ್ಥಾನದ ಜಾಗಗಳನ್ನು ಕಬಳಿಸುವ ಕಾರ್ಯ ನಿಜಕ್ಕೂ ಖಂಡನೀಯ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-17-645691386

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.