ಕುಣಿಗಲ್: ತಾಲ್ಲೂಕಿನ ಬೇಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಹುದ್ದೆಯ ವಿವಾದದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ಬಂದ ಸಹಾಯಕ ನಿಭಂದಕರು, ಸಹಕಾರ ಅಭಿವೃದ್ಧಿ ಅಧಿಕಾರಿ, ಕಾಂಗ್ರೆಸ್ ಮುಖಂಡರು ಮತ್ತು ಅಧ್ಯಕ್ಷರ ಜತೆ ರೆಸಾರ್ಟ್ ಒಂದರಲ್ಲಿ ಮದ್ಯಪಾನ ಗೋಷ್ಠಿಯಲ್ಲಿ ಭಾಗವಹಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಕಾರಣವಾಗಿದೆ.

ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಆದೇಶವಿಲ್ಲದಿದ್ದರೂ, ಪೊಲೀಸರು ನಿವೃತ್ತ ಕಾರ್ಯದರ್ಶಿ ಮನೆ ಬಳಿ ಹೋಗಿದ್ದು, ಗ್ರಾಮಸ್ಥರ ವಿರೋಧಕ್ಕೆ ಕಾರಣವಾಗಿತ್ತು. ನಂತರ ಅಧ್ಯಕ್ಷ ಶ್ರೀಧರ್, ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀಲ್, ಕಾಂಗ್ರೆಸ್ ಮುಖಂಡ ಮೂರ್ತಿ ಬೆಂಬಲಿಗರೊಂದಿಗೆ ಸಂಘದ ಕಚೇರಿಯ ಬೀಗ ಮುರಿದು, ದಾಖಲೆಗಳಿದ್ದ ಕೊಠಡಿಗೆ ಬೀಗ ಹಾಕಿದ್ದರು.

ಈ ಬಗ್ಗೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ನಾಗಾನಂದ, ಪೊಲೀಸರಿಗೆ ದೂರು ನೀಡಿದ್ದು ಹಿಂಬರಹ ನೀಡಿದ ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಲು ಸಹಕಾರಿ ಇಲಾಖೆ ಸಹಾಯಕ ನಿಬಂಧಕ ರಾಮಪ್ರಸಾದ್ ಅವರಿಗೆ ನೀಡಿದ ಸೂಚನೆ ಮೇರೆಗೆ ಶುಕ್ರವಾರ ಠಾಣೆಗೆ ಬಂದು ಮಾಹಿತಿ ನೀಡಿದ ನಂತರ ಎಲ್ಲರೂ, ಸೋಲೂರು ಬಳಿಯ ರೆಸಾರ್ಟ್ಗೆ ತೆರಳಿ ಮದ್ಯಪಾನ ಮಾಡಿದ ದೃಶ್ಯಗಳು ಚರ್ಚೆಗೆ ಗ್ರಾಸವಾಗಿದೆ.

ಬುಧವಾರ ಪೊಲೀಸರ ಬೆಂಬಲದೊಂದಿಗೆ ಮನೆ ಬಳಿ ಅನುಚಿತವಾಗಿ ನಡೆದುಕೊಂಡ ಬಗ್ಗೆ ಮತ್ತೂ ಸಂಘದ ಕೊಠೆಡಿಯಲ್ಲಿದ್ದ ದಾಖಲೆ ಮತ್ತು ಹಣ ಕಳುವಾಗಿರುವ ಬಗ್ಗೆ ನಿವೃತ್ತ ಕಾರ್ಯದರ್ಶಿ ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-17-291778019

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.