ಕುಣಿಗಲ್: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬೆಟ್ಟದ ರಂಗನಾಥಸ್ವಾಮಿ ದೇವಾಲಯವನ್ನು ಭಕ್ತರೊಬ್ಬರು ₹40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದು, ಮೊದಲ ವರ್ಷದ ಜಾತ್ರೆಗೆ ಮುನ್ನುಡಿ ಬರೆದಿದ್ದಾರೆ.

ಕೊತ್ತಗೆರೆ ಹೋಬಳಿ ಮೆಣಸಿನಹಳ್ಳಿಯ 400 ವರ್ಷದ ಇತಿಹಾಸವಿರುವ ಬೆಟ್ಟದ ರಂಗನಾಥಸ್ವಾಮಿಯ ಕ್ಷೇತ್ರ ಸಮುದ್ರದಿಂದ 3,000 ಮೀಟರ್ ಎತ್ತರದಲ್ಲಿದ್ದು, ಸುಂದರವಾದ ಪ್ರಕೃತಿಯ ಮಡಿಲಲ್ಲಿ ರಂಗನಾಥ ಸ್ವಾಮಿ ನೆಲೆಸಿದೆ.

ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮೂಲಸೌಕರ್ಯ ಕೊರತೆ ನೀಗಿಸಲು ಭಕ್ತರ ತಂಡ ಶ್ರಮಿಸುತ್ತಿದೆ. ಬೆಟ್ಟಕ್ಕೆ ಹತ್ತಲು ನೂರಾರು ಮೆಟ್ಟಿಲುಗಳಿದ್ದು, ಹತ್ತಲು ಅನುಕೂಲವಾಗುವಂತೆ ಶೀಟ್ಗಳನ್ನು ಅಳವಡಿಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

‘ರಂಗ ಗ್ರೂಪ್’ ಮಾಲೀಕರಾದ ಬಸವಮತ್ತಿಕೆರೆಯ ರಾಮಕೃಷ್ಣ, ವಸಂತಕುಮಾರ್ ಸಹೋದರರು ಕ್ಷೇತ್ರದ ಪ್ರಗತಿಗೆ ನೆರವಾಗಿದ್ದಾರೆ.

ಬೆಟ್ಟದ ಮೇಲಿನ ದೇವಾಲಯ ಕಿರಿದಾಗಿದ್ದ ಕಾರಣ ಕೆಲವೇ ಭಕ್ತರಿಗೆ ಹೋಗಲು ಅವಕಾಶಗಳಿದೆ. ಮಳೆಗೆ ಬೆಟ್ಟ ಕುಸಿದು ದೇವಾಲಯಕ್ಕೆ ಧಕ್ಕೆಯಾಗುತ್ತಿರುವುದನ್ನು ಮನಗಂಡು ಮೊದಲಿಗೆ ಬೆಟ್ಟ ಕುಸಿಯುವುದನ್ನು ತಡೆಗೆ ₹15 ಕೋಟಿ ವೆಚ್ಚದಲ್ಲಿ (ಎರಡು ಎಕರೆ) ಕಾಂಕ್ರಿಟ್ ತಡೆಗೋಡೆಗಳನ್ನು ನಿರ್ಮಿಸುತ್ತಿದ್ದು, ಶೇ 90 ಕಾಮಗಾರಿ ಮುಗಿದಿದೆ. ಬೆಟ್ಟದ ಮೇಲಿರುವ 70– 50 ಅಡಿ ಕಿರಿದಾದ ದೇವಾಲಯದ ಜಾಗವನ್ನು 250ರಿಂದ 150 ವಿಸ್ತರಿಸಿಕೊಂಡು ವಿಶಾಲ ದೇವಾಲಯವನ್ನು ₹25 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಬೆಟ್ಟಕ್ಕೆ ಕಾಂಕ್ರೀಟ್ ತಡೆಗೋಡೆ ಪೂರ್ಣಗೊಳ್ಳುತ್ತಿರುವ ಸಮಯದಲ್ಲಿ ಮೊದಲ ಬಾರಿಗೆ ಜಾತ್ರೆ ಪ್ರಾರಂಭಿಸುತ್ತಿದ್ದು, ಮೇ 30ರಂದು ಬೆಟ್ಟದಲ್ಲಿ ದೇವಾಲಯಕ್ಕೆ ಸಂಬಂಧಪಟ್ಟ ಸುತ್ತಲಿನ ಗ್ರಾಮ ದೇವತೆಗಳ ಉತ್ಸವ, ವಿಶೇಷ ಪೂಜೆ, ಅಲಂಕಾರ, ಹೋಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರೆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ.

‘ರಂಗನಾಥಸ್ವಾಮಿ ಬೆಟ್ಟಕ್ಕೆ ಪ್ರತಿವಾರ ಅಸಂಖ್ಯಾತ ಭಕ್ತರು ಭೇಟಿ ನೀಡುತ್ತಿದ್ದಾರೆ. ಅರ್ಚಕರು ತಮ್ಮ ಒಳ ಜಗಳಗಳನ್ನು ಬಿಟ್ಟು ಶ್ರದ್ಧೆಯಿಂದ ಪೂಜೆ ಮಾಡಿ ತಾರತಮ್ಯ ಮಾಡದೆ ಭಕ್ತರೊಂದಿಗೆ ಸೌಜನ್ಯದಿಂದ ವರ್ತಿಸಿ, ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಕಾರ್ಯನಿರ್ವಸಬೇಕು’ ಎಂದು ಕುಣಿಗಲ್ ಟೌನ್ ಸಹಕಾರ ಸಂಘದ ನಿರ್ದೇಶಕ ಮಾರುತಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-17-715206000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.