ಕುಣಿಗಲ್: ತಾಲ್ಲೂಕಿನ ಪಡಿತರ ವಿತರಣಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರು ಪಡಿತರ ಪಡೆಯಲು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ.

ತಾಲ್ಲೂಕಿನಲ್ಲಿ 117 ಪಡಿತರ ವಿತರಣಾ ಕೇಂದ್ರ ಮತ್ತು ಸಹಕಾರ ಸಂಘದ ಮೂಲಕ 56,365 ಪಡಿತರ ಚೀಟಿದಾರರಿದ್ದು, ಪಡಿತರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಪ್ರತಿ ಕೇಂದ್ರದಲ್ಲೂ ಸರ್ವರ್ ಸಮಸ್ಯೆಯಾಗುತ್ತಿದ್ದು, ಗ್ರಾಹಕರು ಕೆಲಸ ಕಾರ್ಯ ಬದಿಗಿಟ್ಟು ಪಡಿತರ ಸಾಮಾಗ್ರಿ ಪಡೆಯಲು ಕಾಯಬೇಕಾದ ಸ್ಥಿತಿ ಇದೆ.

ಗ್ರಾಮೀಣ ಭಾಗದಲ್ಲಂತೂ ಮಹಿಳೆಯರು ಕೂಲಿ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಬೆಳ್ಳಗೆಯಿಂದಲೇ ಪಡಿತರ ವಿತರಣಾ ಕೇಂದ್ರದ ಮುಂದೆ ಕಾಯಬೇಕಾಗಿದೆ. ವಿತರಕರು ಸರ್ವರ್ ಸಂಪರ್ಕ ದೊರೆತಾಗ ವಿತರಣೆಗೆ ಸಜ್ಜಾಗುತ್ತಿದ್ದಂತೆ ಕೆಲ ಕ್ಷಣದಲ್ಲಿ ಮತ್ತೆ ಸರ್ವರ್ ಸಮಸ್ಯೆಯಾಗುತ್ತಿದೆ.

ಸರ್ವರ್ ಸಮಸ್ಯೆಯಿಂದಾಗಿ ಪಟ್ಟಣದಲ್ಲಿ ಬೆಳಗ್ಗೆ 6ರಿಂದ ವಿತರಣೆ ಪ್ರಾರಂಭಿಸಿದರೆ, 7.30ರ ವರೆಗೆ ಸಮಸ್ಯೆ ಇಲ್ಲದೆ ವಿತರಣೆ ಮಾಡಬಹುದು. ನಂತರ ಮತ್ತೆ ಸಮಸ್ಯೆ ಪ್ರಾರಂಭವಾಗಿ ಒಂದು ಕಾರ್ಡ್ ಎಂಟ್ರಿ ಮಾಡಿ ಹೆಬ್ಬೆಟ್ಟು ಪಡೆಯುವುದಕ್ಕೆ ಕನಿಷ್ಠ ಹತ್ತು ನಿಮಿಷವಾಗುತ್ತದೆ. ಹತ್ತು ಗಂಟೆ ನಂತರ ಸರ್ವರ್ ಕಾರ್ಯನಿರ್ವಹಿಸದ ಕಾರಣ ಎಲ್ಲವೂ ಸ್ಥಗಿತಗೊಂಡು ಅವ್ಯವಸ್ಥೆಯಾಗುತ್ತಿದೆ ಎಂದು ಪಡಿತರ ವಿತರಣಾ ಕೇಂದ್ರದ ಮಾಲೀಕರು ಹೇಳಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕ ಮತ್ತು ಪಡಿತರ ವಿತರಣಾ ಕೇಂದ್ರದ ಮಾಲೀಕರ ಸ್ಥಿತಿ ಶೋಚನೀಯವಾಗಿದೆ. ಬೆಳಗ್ಗೆ ಎದ್ದು ಹೈನುಗಾರಿಕೆಯಲ್ಲಿ ತೊಡಗುವುದನ್ನು ಬಿಟ್ಟು, ವಿದ್ಯುತ್ಗಾಗಿ ಕಾಯುವುದನ್ನು ಬಿಟ್ಟು, ಪಡಿತರ ಪಡೆಯಲು ಬಂದರೂ ಸರ್ವರ್ ಸಮಸ್ಯೆಯಿಂದಾಗಿ ಅತ್ತ ದನಕರ ನೋಡುವ ಹಾಗಿಲ್ಲ, ಇತ್ತ ಕೃಷಿಕಡೆ ಗಮನಹರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಚೌಡನಕುಪ್ಪೆಯ ಶಿವಣ್ಣ, ಜಯಮ್ಮ ದೂರಿದ್ದಾರೆ.

ತಾಲ್ಲೂಕಿನ 117 ಪಡಿತರ ವಿತರಣಾ ಕೇಂದ್ರಗಳ ಪೈಕಿ 21 ಕೇಂದ್ರಗಳಲ್ಲಿ ಮೇ 23 ಆದರೂ ಪಡಿತರ ಸಾಮಗ್ರಿ ಇನ್ನೂ ವಿತರಣೆಯಾಗಿಲ್ಲ.

ಮೇ ತಿಂಗಳಲ್ಲಿ ಸರ್ಕಾರದಿಂದ ಅಕ್ಕಿ ವಿತರಣೆಯಾಗಿಲ್ಲ. ಬದಲಿಗೆ ಕೇಂದ್ರ ಸರ್ಕಾರದಿಂದ ಮೇ ಮತ್ತು ಜೂನ್ ತಿಂಗಳ ಆಹಾರ ಧಾನ್ಯ ವಿತರಣೆಯಾಗಿದೆ. ಎರಡೂ ತಿಂಗಳ ಪಡಿತರ ಸಾಮಗ್ರಿ ಪಡೆದವರಿಂದ ಎರಡು ಬಾರಿ ಬಯೊಮೆಟ್ರಿಕ್ ಪಡೆಯಬೇಕಾಗಿರುವುದರಿಂದ ಸಮಯ ಹೆಚ್ಚು ತಗುಲುತ್ತಿದೆ.

ಸರ್ವರ್ ಸಮಸ್ಯೆ ಸೃಷ್ಟಿಸಿ, ಆದಷ್ಟೂ ಪಡಿತರ ಸಾಮಗ್ರಿ ಉಳಿಸಿಕೊಳ್ಳಲು ಸರ್ಕಾರ ಪರೋಕ್ಷವಾಗಿ ಕಾರ್ಯನಿರ್ವಹಿವಂತಿದೆ ಎಂದು ಸ್ಥಳೀಯ ಜೆಡಿಎಸ್ ಮುಖಂಡರು ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-17-1751623011

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.