ಕುಣಿಗಲ್ (ತುಮಕೂರು): ತಾಲ್ಲೂಕಿನ ಚಿಗನಿಪಾಳ್ಯ ಬಳಿ ರಾಜ್ಯ ಹೆದ್ದಾರಿಯಲ್ಲಿ ಲಾರಿ ಮತ್ತು ಕಾರಿನ ನಡುವೆ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ಮಂಡ್ಯದ ಶುಗರ್ ಕಾಲೊನಿ ನಿವಾಸಿಗಳಾದ ಕುಮಾರ ನರಸಿಂಹಸ್ವಾಮಿ (65), ಪತ್ನಿ ಗಾಯತ್ರಿ (62), ಕುಮಾರ ಅವರ ಸಹೋದರಿ ಗಾಯತ್ರಿ (63) ಮತ್ತು ಸಂಬಂಧಿ, ಚಾಲಕ ಮೈಸೂರಿನ ಗುರುರಾಜ ಲೇಔಟ್ನರಘು ಕುಮಾರ (56) ಮೃತರು.

ಕುಮಾರ ನರಸಿಂಹಸ್ವಾಮಿ, ಗಾಯತ್ರಿ ದಂಪತಿ 24ನೇ ವಿವಾಹವಾರ್ಷಿಕೋತ್ಸವ ಅಂಗವಾಗಿ ಮನೆದೇವರಾದ ದೇವರಾಯನದುರ್ಗದ ಲಕ್ಷ್ಮಿನರಸಿಂಹಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಮರಳುವಾಗ ಅಪಘಾತ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಶವಗಳನ್ನು ಹೊರತೆಗೆಯಲು ಪೊಲೀಸರು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.