ಕುಣಿಗಲ್: ಈಚೇಗೆ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆ ಫಲಿತಾಂಶ ಪ್ರಕಟಣೆಗೂ ಮುನ್ನ ಮರು ಎಣಿಕೆ ಮಾಡಲು ರಾಜ್ಯ ಚುನಾವಣಾಧಿಕಾರಿ (ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ) ಆದೇಶ ಹೊರಡಿಸಿದ್ದರೂ, ಪರಿಗಣನೆ ಮಾಡದ ತಾಲ್ಲೂಕು ಚುನಾವಣಾಧಿಕಾರಿ ಮಮತಾ ಮಣಿ ಕ್ರಮವನ್ನು ದಲಿತಪರ ಸಂಘಟನೆಗಳು ಮತ್ತು ಶಿಕ್ಷಕರು ಖಂಡಿಸಿದ್ದಾರೆ.

ದಲಿತ ಮುಖಂಡ ಮಲ್ಲಿಪಾಳ್ಯ ಶ್ರೀನಿವಾಸ್ ಮಾತನಾಡಿ, ಚುನಾವಣೆಗೆ ಸ್ಪರ್ಧಿಸಿದ್ದ ಶಿಕ್ಷಕಿ ಜಯಲಕ್ಷ್ಮಿ ಅವರಿಗೆ 249 ಮತ ದೊರಕಿದೆ. ಪ್ರತಿಸ್ಪರ್ಧಿ ಪದ್ಮಾವತಿ 250 ಮತ ಪಡೆದಿದ್ದು, ಅಸಿಂಧುವಾಗಿದ್ದ 9 ಮತಗಳ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಮರು ಎಣಿಕೆಗೆ ಅಂದೇ ಮನವಿ ಮಾಡಿದ್ದರೂ, ಪರಿಗಣಿಸದ ಕಾರಣ ರಾಜ್ಯ ಚುನಾವಣಾಧಿಕಾರಿಗೆ ಮೊರೆ ಹೋಗಿದ್ದು, ಅಧಿಕಾರಿಗಳು ಮರುಎಣಿಕೆಗೆ ಆದೇಶ ಹೊರಡಿಸಿದ್ದರು ಎಂದರು.

ತಾಲ್ಲೂಕು ಚುನಾವಣಾಧಿಕಾರಿ ಮಮತಾ ಮಣಿ ಆದೇಶವನ್ನು ಪರಿಪಾಲನೆ ಮಾಡದೆ ಒಂದು ಗುಂಪಿನ ಶಿಕ್ಷಕರ ಒತ್ತಡಕ್ಕೆ ಮಣಿದು ಮರು ಎಣಿಕೆ ಮಾಡದೆ, ರಾಜ್ಯ ಚುನಾವಣಾಧಿಕಾರಿ ಆದೇಶವನ್ನು ಉಲ್ಲಂಘಿಸಿ ಫಲಿತಾಂಶ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸೋಮವಾರ ಬೆಳಗ್ಗೆ ದಲಿತ ಮುಖಂಡ ಶಿವಶಂಕರ್, ಭಕ್ತರಹಳ್ಳಿ ಕುಮಾರ್ ಮತ್ತು ಒಂದು ಗುಂಪಿನ ಶಿಕ್ಷಕರು ಮರು ಎಣಿಕೆಗೆ ಮತ್ತೆ ಆಗ್ರಹಿಸಿದರೂ, ಪರಿಗಣಿಸದೆ ಪ್ರಕಟಿಸಿದ ಫಲಿತಾಂಶದಂತೆ ಪ್ರಮಾಣ ಪತ್ರ ವಿತರಿಸಿ, ಕಾರ್ಯಕಾರಿ ಮಂಡಳಿಯ ಚುನಾವಣೆಯನ್ನೂ ಮೇ. 10ಕ್ಕೆ ಘೋಷಣೆ ಮಾಡಿದ್ದಾರೆ.

ಆದೇಶದಂತೆ ಮರು ಎಣಿಕೆ ಮಾಡದ ತಾಲ್ಲೂಕು ಚುನಾವಣಾಧಿಕಾರಿ ಮಮತಾ ಮಣಿ ಕ್ರಮ ಖಂಡಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-17-1975629303

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.