ಕುಣಿಗಲ್: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದ ಪ್ರಬಲ ಆಕಾಂಕ್ಷಿ ರಾಮಸ್ವಾಮಿ ಅವರ ಹೆಸರನ್ನು ಅಂತಿಮ ಕ್ಷಣದಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಶಿಕ್ಷಕರ ಎರಡು ಬಣ ಚುರುಕಾಗಿದ್ದವು. ಸಂಘದ ಹಾಲಿ ಅಧ್ಯಕ್ಷ ಬೋರೆಗೌಡ, ಕಾರ್ಯದರ್ಶಿ ನಂದಿನಿ, ಮಾಜಿ ಅಧ್ಯಕ್ಷ ಶಿವರಾಮು ಬಣ ಮತ್ತು ವಿದ್ಯಾ ಇಲಾಖೆ ನೌಕರರ ಸಹಕಾರ ಸಂಘದ ಅಧ್ಯಕ್ಷ ರಾಮಸ್ವಾಮಿ, ನಿರ್ದೇಶಕ ರವಿಕುಮಾರ್, ಮಹಾಲಕ್ಷ್ಮಮ್ಮ ಅವರ ಮತ್ತೊಂದು ಬಣ ಸಿದ್ಧತೆಯಲ್ಲಿ ತೊಡಗಿದ್ದವು.

ಆದರೆ, ಅಂತಿಮ ಕ್ಷಣದಲ್ಲಿ ರಾಮಸ್ವಾಮಿ ಹೆಸರನ್ನು ಕರಡು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಎಂಟು ನಿವೃತ್ತ ಶಿಕ್ಷಕರ ಹೆಸರನ್ನು ಹೊಸದಾಗಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ರಾಮಸ್ವಾಮಿ ಬಣದ ಶಿಕ್ಷಕರು ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಅಸಮಾಧಾನ ಹೊರ ಹಾಕಿದರು.

ತಮ್ಮ ಬಣ ಗೆಲುವು ಖಚಿತವಾಗಿತ್ತು. ಇದನ್ನು ಮನಗಂಡು ತಮ್ಮ ಸ್ಪರ್ಧೆ ತಪ್ಪಿಸಲು ಸಂಘದ ಹಾಲಿ ಅಧ್ಯಕ್ಷ ಬೋರೆಗೌಡ ಬಣ ಸಂಚು ನಡೆಸಿ ಕರಡು ಮತದಾರರ ಪಟ್ಟಿಯಲ್ಲಿದ್ದ ತಮ್ಮ ಹೆಸರನ್ನು ಅಂತಿಮ ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ಶುಕ್ರವಾರ ರಾತ್ರಿ ಚುನಾವಣಾಧಿಕಾರಿಗೆ ಮತದಾರರ ಅಧಿಕೃತ ಪಟ್ಟಿ ನೀಡಿದ್ದಾರೆ. ಇದರಲ್ಲಿ ತಮ್ಮ ಏಕೈಕ ಹೆಸರು ಕೈ ಬಿಡಲಾಗಿದೆ. ಎರಡನೇ ಶನಿವಾರ ಮತ್ತು ಭಾನುವಾರ ರಜೆ ಇದ್ದು, ನ್ಯಾಯಾಲಯ ಮೊರೆಹೋಗಲು ಅವಕಾಶವಿಲ್ಲ ಎಂದು ರಾಮಸ್ವಾಮಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಎಚ್.ಬಿ. ರವಿಕುಮಾರ್. ಶ್ರೀನಿವಾಸ್, ಹನುಮಂತರಾಯಪ್ಪ, ಮಹಾಲಕ್ಷಿ ಹನುಮಂತಯ್ಯ, ಉಮೇಶ್, ಷಡಕ್ಷರಿ ಇದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-17-156248695

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.