ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭಾಷೆ ಮಹತ್ವ ಅರಿಯಿರಿ: ನಾಹೀದಾ ಜಮ್ ಜಮ್

Last Updated 29 ಅಕ್ಟೋಬರ್ 2021, 3:48 IST
ಅಕ್ಷರ ಗಾತ್ರ

ಕೊರಟಗೆರೆ: ರಾಜ್ಯ ಸರ್ಕಾರವು ಲಕ್ಷ ಕಂಠ ಕನ್ನಡ ಗೀತ ಗಾಯನ ಕಾರ್ಯಕ್ರಮ ಜಾರಿಗೆ ತಂದಿರುವುದು ಕನ್ನಡಿಗರಲ್ಲಿ ಹೊಸ ಹುರಪು ಮೂಡಿಸಿದೆ. ಕನ್ನಡಿಗರ ಆತ್ಮಾಭಿಮಾನ ಹೆಚ್ಚಿಸಿದೆ ಎಂದು ತಹಶೀಲ್ದಾರ್ ನಾಹೀದಾ ಜಮ್ ಜಮ್ ಅಭಿಪ್ರಾಯಪಟ್ಟರು.

ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಾಮೂಹಿಕ ಗೀತಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡಿಗರು ಒಂದೇ ಎನ್ನುವ ಜಾಗತಿಕ ಗುರಿಯಲ್ಲಿ ಬಾಳಬೇಕಿದ್ದು, ಇತರೆ ಭಾಷೆಯವರಿಗೆ ಕನ್ನಡದ ನೆಲ, ಜಲ, ಬಾಷೆ, ವೈವಿಧ್ಯ ಮತ್ತು ಸಂಸ್ಕೃತಿ ತಿಳಿಸಿಕೊಡುವುದರೊಂದಿಗೆ ಕನ್ನಡದ ಮಹತ್ವ ತಿಳಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ಡಾ.ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಮತ್ತು ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಿದರು.

ತಾ.ಪಂ ಕಾರ್ಯನಿರ್ವಹಣಾಧಿಕಾರಿ ಡಿ.ದೊಡ್ಡಸಿದ್ದಯ್ಯ, ಬಿಇಒ ಎನ್.ಎಸ್. ಸುಧಾಕರ್, ಡಾ.ಸುಜಾತ ನಾಗ್, ಬಿಸಿಎಂ ಅಧಿಕಾರಿ ಅನಂತರಾಜು, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್.ನಟರಾಜ್, ಸದಸ್ಯರಾದ ಕೆ.ಆರ್. ಓಬ
ಳರಾಜು, ಮುಖಂಡರಾದ ರಾಜಣ್ಣ, ಚಿಕ್ಕರಂಗಯ್ಯ, ಅರವಿಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT