ತುಮಕೂರು: ಇಂಗ್ಲಿಷ್ ಎನ್ನುವ ಮಾಯಾವಿ, ಹಲವು ರೀತಿಯಲ್ಲಿ ನಮ್ಮನ್ನು ಕೆಣಕುತ್ತಿದೆ. ಸ್ಪರ್ಧಾತ್ಮಕ ಯುಗ ಎದುರಿಸಲು ಇಂಗ್ಲಿಷ್ ಕಲಿಯುವುದು ಅನಿವಾರ್ಯವಾಗಿದೆ ಎಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಮೇಲಿನಂತೆ ಉತ್ತರಿಸಿದರು.

10ನೇ ತರಗತಿ ವರೆಗೆ ಕನ್ನಡವನ್ನೇ ಮಾತೃಭಾಷೆಯನ್ನಾಗಿ ಕಲಿಸಬೇಕು ಎಂಬ ಬೇಡಿಕೆಯ ಸುತ್ತ ಸುತ್ತಿಕೊಂಡಿರುವ ಕಾನೂನಿನ ತೊಡಕು ಬಿಡಿಸುವ ಕಡೆಗೆ ಯಾರೂ ಯೋಚಿಸುತ್ತಿಲ್ಲ. ತೊಡಕುಗಳು ಹಾಗೆ ಮುಂದಕ್ಕೆ ಹೋಗುತ್ತಿವೆ ಎಂದರು.

‘ನಮ್ಮ ನಾಯಕರು, ರಾಜಕಾರಣಿಗಳು ತಾವೇ ಖಾಸಗಿ ಶಾಲೆ ಸ್ಥಾಪಿಸಿ, ರಕ್ಷಿಸಿ, ಅನೇಕ ಬಗೆಯ ಆಯಾಮ ಸೃಷ್ಟಿಸಿದ್ದಾರೆ. ಇದು ದೊಡ್ಡ ಸಮಸ್ಯೆಯಾಗಿದೆ. ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ವಿಧಾನವು ಸಮುದಾಯ ಪ್ರತ್ಯೇಕಿಸುವ ಶಿಕ್ಷಣ ವಿಧಾನವಾಗಿದೆ. ಸರ್ಕಾರಿ ಶಾಲೆ ಪ್ರತಿಭೆ ಅರಳಿಸುವ ಕೆಲಸ ಮಾಡಿದರೆ, ಖಾಸಗಿ ಶಾಲೆಗಳು ಪ್ರತಿಭೆಯನ್ನು ಪ್ರತಿಷ್ಠೆಯನ್ನಾಗಿ ಬೆಳೆಸುತ್ತಿವೆ’ ಎಂದು ವಿಶ್ಲೇಷಿಸಿದರು.

ಪ್ರಸ್ತುತ ವ್ಯವಸ್ಥೆಯ ವಿರುದ್ಧದ ಧ್ವನಿ ಅಡಗಿಸುವ ಕೆಲಸ ಹೆಚ್ಚಾಗಿದೆ. ಧಾರ್ಮಿಕ ಮೂಲಭೂತವಾದ ನಮಗೆ ಅಪಾಯ ತಂದಿಟ್ಟಿದೆ ಎಂದು ಎಚ್ಚರಿಸಿದರು.

ವಿಮರ್ಶಕಿ ಎಂ.ಎಸ್.ಆಶಾದೇವಿ, ಚಿಂತಕ ಕೆ.ದೊರೈರಾಜ್, ವಿಮರ್ಶಕ ರವಿಕುಮಾರ್ ನೀಹ, ಕಥೆಗಾರ ಗೋವಿಂದರಾಜು ಎಂ.ಕಲ್ಲೂರು, ಎಂ.ಗೋವಿಂದರಾಯ, ಲಕ್ಷ್ಮಿಕಾಂತರಾಜೇ ಅರಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.