ಶನಿವಾರ, ಡಿಸೆಂಬರ್ 7, 2019
24 °C
ತಿಗಳ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ; ಮೇಯರ್ ಲಲಿತಾ ರವೀಶ್ ಹೇಳಿಕೆ

ಶೈಕ್ಷಣಿಕವಾಗಿ ಸಮುದಾಯ ಏಳಿಗೆ ಸಾಧಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತಿಗಳ ಸಮುದಾಯದವರು ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣದಿಂದಲೇ ಏಳಿಗೆ ಎಂಬುದನ್ನು ಮರೆಯಬಾರದು ಎಂದು ಮೇಯರ್ ಲಲಿತಾ ರವೀಶ್ ಹೇಳಿದರು.

ನಗರದ ಹನುಮಂತಪುರ ಬಡಾವಣೆಯ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ಅಗ್ನಿ ಬನ್ನಿರಾಯ ತಿಗಳ ಮಹಾಸಭಾ ಮತ್ತು ಅಗ್ನಿಕುಲ ತಿಗಳ ಜನಾಂಗ, ನಾಲ್ಕು ಕಟ್ಟೆ ಯಜಮಾನರುಗಳ ನೇತೃತ್ವದಲ್ಲಿ ಆಯೋಜಿಸಿದ್ಧ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮುದಾಯದಲ್ಲಿ ಶಿಕ್ಷಣ ಪಡೆದವರು, ಪಡೆಯುವವರು ಕಡಿಮೆ. ಈ ಪರಿಸ್ಥಿತಿ ಬದಲಾಗಬೇಕು. ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಪೋಷಕರಿಗೆ ಮನವಿ ಮಾಡಿದರು.

ಸಾಹಿತಿ ಡಾ.ಕವಿತಾ ಕೃಷ್ಣ ಅವರು ತಿಗಳ ಸಮುದಾಯದ ಹಿನ್ನೆಲೆ, ಜೀವನ ಕ್ರಮ, ಸಾಧಕರ ಬಗ್ಗೆ ಮಾತನಾಡಿದರು.

ಸಮಾಜದ ಮುಖಂಡರಾದ ಎಂ.ಆಂಜನೇಯ, ಅಗ್ನಿಕುಲ ತಿಗಳ ಜನಾಂಗದ ಅಧ್ಯಕ್ಷ ಕುಂಭಿ ನರಸಯ್ಯ,  ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಯ್ಯ, ಅಗ್ನಿಬನ್ನಿರಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಲ್.ಕುಂಭಯ್ಯ, ಪಾಲಿಕೆ ಸದಸ್ಯರಾದ ಎ.ಶ್ರೀನಿವಾಸ್, ಶಶಿಕಲಾ ಗಂಗಹನುಮಯ್ಯ, ಎನ್.ಎಸ್.ಶಿವಣ್ಣ, ಪ್ರೆಸ್ ರಾಜಣ್ಣ ಹಾಗೂ ಸಮುದಾಯದ ಮುಖಂಡರು ಇದ್ದರು. 

ಪ್ರತಿಕ್ರಿಯಿಸಿ (+)