ಭಾನುವಾರ, ಜನವರಿ 17, 2021
26 °C
ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಆಶಯ

ರಾಜ್ಯದೆಲ್ಲೆಡೆ ದೂರತರಂಗ ವಿಸ್ತರಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ‘ರಾಜ್ಯದ ಎಲ್ಲ ವಿದ್ಯಾರ್ಥಿ ಗಳಿಗೂ ದೂರತರಂಗ ಶಿಕ್ಷಣ ವಿಸ್ತಾರವಾಗಲಿ’ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇನ್ಫೋಸಿಸ್ ಫೌಂಡೇಶನ್ ಹಾಗೂ ಪಾವಗಡ ರಾಮಕೃಷ್ಣ ಆಶ್ರಮ ಆಯೋ
ಜಿಸಿದ್ದ ದೂರತರಂಗ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇನ್ಫೋಸಿಸ್ ಸಂಸ್ಥಾಪಕ ಎನ್.ಅರ್.ನಾರಾಯಣಮೂರ್ತಿ ಅವರು ವಿದ್ಯಾಭ್ಯಾಸ ಮಾಡಿದ ಮಧುಗಿರಿ ಶಾಲೆಯಲ್ಲಿ ದೂರ ತರಂಗ ಶಿಕ್ಷಣ ಪ್ರಾರಂಭ ಮಾಡಿರುವುದು ಬಹಳ ಸಂತಸ ತಂದಿದೆ ಎಂದರು. 

ಕೋವಿಡ್‌–19 ಸಮಾಜದ ಎಲ್ಲ ಕ್ಷೇತ್ರಗಳಿಗೂ ಕರಿ ಛಾಯೆ ಮೂಡಿಸಿದ್ದು, ಅದರ ಜೊತೆಗೆ ಬದುಕಬೇಕಿದೆ. ಕೊರೊನಾವನ್ನು ನಿರ್ಲಕ್ಷಿಸದೆ ಸರ್ಕಾರದ ಆದೇಶ ಪಾಲಿಸಬೇಕು ಎಂದರು.

ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣಮೂರ್ತಿ ವರ್ಚುವಲ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಉತ್ತಮ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಉತ್ತಮ ಚಿಂತನೆ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು. ನಾನು ವಿದ್ಯಾಭ್ಯಾಸ ಮಾಡಿದ ಶಾಲೆಯಲ್ಲಿ ದೂರ ತರಂಗ ಶಿಕ್ಷಣ ಯೋಜನೆ ಮಕ್ಕಳಿಗೆ ದೊರಕಬೇಕು’ ಎಂದು ತಿಳಿಸಿದರು.

ಸಾಹಿತಿ ಡಾ. ದೊಡ್ಡರಂಗೇಗೌಡ ಮಾತನಾಡಿ, ಎನ್.ಆರ್. ನಾರಾಯಣ ಮೂರ್ತಿ ದಂಪತಿಗಳು ಸ್ವಾರ್ಥವಿಲ್ಲದ ಸಾಧಕರಾಗಿದ್ದು, ಅವರ ಜೀವನ ಗಾಥೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸುವಂತೆ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.

ಪಾವಗಡದ ರಾಮಕೃಷ್ಣ ಸೇವಾ ಶ್ರಮದ ಜಪಾನಂದ ಮಹರಾಜ್ ಸ್ವಾಮೀಜಿ ಮಾತನಾಡಿ, ‘ನಾರಾಯಣ ಮೂರ್ತಿ ಅವರು ಶಿಕ್ಷಣ ಪಡೆದ ಈ ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು ಹೆಮ್ಮೆಯ ವಿಷಯ. ಮೂರ್ತಿ ದಂಪತಿಗಳು ಸಮಾಜ ಸೇವೆ
ಯಲ್ಲಿ ತೊಡಗಿ ಕೊಂಡಿರುವುದು ಮುಂದಿ ನ ಪೀಳಿಗೆಗೆ ಮಾದರಿಯಾಗಲಿ’ ಎಂದರು. ಇನ್ಫೋಸಿಸ್ ಸಂಸ್ಥೆಯ ಉಪಾಧ್ಯಕ್ಷ ಗುರುರಾಜ್ ದೇಶಪಾಂಡೆ ಮಾತ ನಾಡಿದರು. ಉಪವಿಭಾಗಾಧಿಕಾರಿ ಸೋಮಪ್ಪ ಇ.ಎಂ.ಕಡಕೋಳ್, ಡಿಡಿಪಿಐ ಎಂ.ರೇವಣ್ಣ ಸಿದ್ದಪ್ಪ, ಬಿಇಒ
ನಂಜುಂಡಯ್ಯ, ಡಿವೈಎಸ್‍ಪಿ ಎಂ. ಪ್ರವೀಣ್, ತಹಶೀಲ್ದಾರ್ ಡಾ. ಜಿ.ವಿಶ್ವನಾಥ್, ಸಮಗ್ರ ಶಿಕ್ಷಣ ಯೋಜನೆ ನಿರ್ದೇಶಕ ಗೋಪಾಲಕೃಷ್ಣ, ಡಯಟ್ ಪ್ರಾಂಶುಪಾಲ ವೈ.ಎನ್ ರಾಮ ಕೃಷ್ಣಯ್ಯ, ಮಂಜುನಾಥ್, ಪಿಯುಸಿ ಡಿ.ಡಿ ನರಸಿಂಹಮೂರ್ತಿ, ಮುಖ್ಯ ಶಿಕ್ಷಕ ಹನುಮಂತರಾಯಪ್ಪ ಇದ್ದರು.

ಟ್ಯಾಬ್ ವಿತರಣೆ: ಪಾವಗಡ ತಾಲ್ಲೂಕಿನ ವಳ್ಳೂರಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್‌ ಕುಮಾರ್ ಟ್ಯಾಬ್‌ ವಿತರಿಸಿದರು.

ವಳ್ಳೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಟ್ಯಾಬ್ ಕೊಡಿಸುವ ಮುಖಾಂತರ ಪುರುಷೋತ್ತಮ ರೆಡ್ಡಿ ಉತ್ತಮ ಕೆಲಸ ಮಾಡಿದ್ದಾರೆ. ಇಂತಹ ಕೆಲಸ ಇತರರಿಗೆ ಪ್ರೇರಣೆಯಾಗಬೇಕು. ರೋಟರಿ ಸಂಸ್ಥೆಯು ರಾಜ್ಯದ ಸಾವಿರಾರು ಮಂದಿಗೆ ಟ್ಯಾಬ್ ಕೊಟ್ಟಿದೆ ಎಂದು ಶ್ಲಾಘಿಸಿದರು.

ಟ್ಯಾಬ್ ಪ್ರಾಯೋಜಕ ಪುರುಷೋತ್ತ ಮರೆಡ್ಡಿ, ವೈದ್ಯ ಪ್ರಭಾಕರರೆಡ್ಡಿ, ಮುಖ್ಯ ಶಿಕ್ಷಕ ವೆಂಕಟೇಶ್, ಕಟ್ಟಾ ನರಸಿಂಹ ಮೂರ್ತಿ ಮಾತನಾಡಿದರು. ಪ್ರಭಾರ ಬಿಇಒ ಪವನ್ ಕುಮಾರ್ ರೆಡ್ಡಿ, ಶಿರಸ್ತೇದಾರ್ ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಕಲಿಯುತ್ತಾ ನಲಿಯೋಣ: ಶಿಕ್ಷಣ ಇಲಾಖೆಯಿಂದ ಜನವರಿ 11ರಿಂದ ಏಪ್ರಿಲ್‌ 5ರವರೆಗೂ ‘ಕಲಿಯುತ್ತಾ ನಲಿಯೋಣ’ ಎಂಬ ಕಾರ್ಯಕ್ರಮ ರೇಡಿಯೊದಲ್ಲಿ ಪ್ರಾರಂಭ ಮಾಡಲಾಗುತ್ತಿದೆ ಎಂದು ಸಚಿವ ಎಸ್.ಆರ್.ಸುರೇಶ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಕಸಬಾ ಹಾಗೂ ದೊಡ್ಡೇರಿ ಹೋಬಳಿಯ ಸರ್ಕಾರಿ ಶಾಲೆಗಳಿಗೆ ಶನಿವಾರ ಭೇಟಿ ನೀಡಿ ಮಾತನಾಡಿದರು.

1ರಿಂದ 4ನೇ ತರಗತಿಯ ಮಕ್ಕಳಿಗೆ ಸೋಮವಾರದಿಂದ ಶುಕ್ರವಾರದವರೆಗೂ ಬೆಳಿಗ್ಗೆ 10ರಿಂದ 12ರವರೆಗೂ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಲೆಗೆ ಬರುವ
ಮಕ್ಕಳು ತಪ್ಪದೇ ತಿಂಡಿ ಹಾಗೂ ಊಟ ಮಾಡಿಕೊಂಡು ಬರಬೇಕು. ಕೋವಿಡ್‌ ಮಾರ್ಗಸೂಚಿ ಅನುಸರಿಸಬೇಕು ಎಂದರು.

ಶಾಸಕ ಎಂ.ವಿ.ವೀರಭದ್ರಯ್ಯ, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಚೌಡಪ್ಪ, ತಹಶೀಲ್ದಾರ್ ಡಾ.ಜಿ.ವಿಶ್ವನಾಥ್, ಡಿಡಿಪಿಐ ರೇವಣ್ಣ ಸಿದ್ದಪ್ಪ, ಇಒ ಅಶ್ವತ್ಥ ನಾರಾಯಣ್, ಬಿಇಒ ನಂಜುಂಡಯ್ಯ, ಬಿಆರ್ ಸಿ ಆನಂದಕುಮಾರ್, ಡಿವೈಎಸ್‌ಪಿ ಎಂ.ಪ್ರವೀಣ್, ಸಿಪಿಐ ಎಂ.ಎಸ್.ಸರ್ದಾರ್ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.