ಶುಕ್ರವಾರ, ಮೇ 7, 2021
24 °C

ನೀರು ಪೂರೈಕೆ ಆದ್ಯತೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕನಾಯಕನಹಳ್ಳಿ: ಬೇಸಿಗೆ ಆರಂಭವಾಗಿದೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಪಟ್ಟಣದ ಜನರಿಗೆ ನೀರು ಒದಗಿಸುವುದು ಪುರಸಭೆಯ ಆದ್ಯತೆಯಾಗಬೇಕು ಎಂದು ಪುರಸಭಾ ಸದಸ್ಯರು ಒತ್ತಾಯಿಸಿದರು.

ಪಟ್ಟಣದ ಪುರಸಭೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಸದಸ್ಯರು ಮಾತನಾಡಿದರು.

ಶುದ್ಧಗಂಗಾ ಘಟಕಕ್ಕೆ ಕೊಡುತ್ತಿರುವ ನೀರನ್ನು ಕಡಿಮೆ ಮಾಡಿ ಪಟ್ಟಣದ ಜನತೆಯ ಮನೆಗಳಿಗೆ ನೀರನ್ನು ನೀಡಿ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ಬಿ.ಎಚ್.ರಸ್ತೆಯ ಐ.ಬಿ.ಮುಂಭಾಗದಿಂದ ಎಸ್‌ಬಿಐ ಬ್ಯಾಂಕ್‌ವರೆಗೆ ರೈಸಿಂಗ್ ಮೈನ್‌ನಲ್ಲಿ ನಳದ ಸಂಪರ್ಕ ಪಡೆದಿದ್ದರೆ ಆ ಜಾಗವನ್ನು ಈಗ ಜಲ್ಲಿಯಲ್ಲಿ ಮುಚ್ಚಿದ್ದಾರೆ. ಈ ಬಗ್ಗೆ ಎಂಜಿನಿಯರ್ ಗಮನ ಹರಿಸಬೇಕು ಎಂದು ಕೆಲವು ಸದಸ್ಯರು ಒತ್ತಾಯಿಸಿದರು.

ಪಟ್ಟಣದಲ್ಲಿರುವ ಪುರಸಭಾ ಮಳಿಗೆಗಳನ್ನು ಹರಾಜು ಮಾಡಿ ಪುರಸಭೆಗೆ ಹೆಚ್ಚಿನ ಆದಾಯ ಬರುವಂತೆ ಮಾಡುವುದು ಹಾಗೂ ಪಟ್ಟಣದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪಟ್ಟಣಕ್ಕೆ ಸಂಬಂಧಪಟ್ಟಂತೆ ಒಳಚರಂಡಿ ವ್ಯವಸ್ಥೆಗೆ ಗುತ್ತಿಗೆ ಕರೆದಿದ್ದು, ಅದು ರದ್ದಾಗಿದೆ. ಮರು ಟೆಂಡರ್ ಆಗಬೇಕಿದೆ ಎಂದು ಸಚಿವರು ಸಭೆಗೆ ತಿಳಿಸಿದರು.

ಪಟ್ಟಣದ ಪುರಸಭೆಗೆ 2021-22ನೇ ಸಾಲಿನಲ್ಲಿ ₹26.20 ಲಕ್ಷ ಉಳಿತಾಯ ಬಜೆಟ್ ಮಂಡಣೆಯಾಯಿತು.

ಆದಾಯಗಳ ಲೆಕ್ಕಾಚಾರದಂತೆ ನಿರೀಕ್ಷಿತ ವೆಚ್ಚಗಳನ್ನು ತಿಳಿಸಿದ್ದು, ಅದರಂತೆ ಸಾಮಾನ್ಯ ಆಡಳಿತಕ್ಕಾಗಿ, ಸಾರ್ವಜನಿಕ ಸುರಕ್ಷತೆಗಾಗಿ, ಆರೋಗ್ಯ ಮತ್ತು ನೀರಿನ ಅನುಕೂಲತೆಗಾಗಿ, ನೌಕರರ ವೇತನ, ವಿದ್ಯುತ್ ವೆಚ್ಚ, ಎಸ್‌ಎ‍ಫ್‌ಸಿ ಮುಕ್ತನಿಧಿ ಕಾಮಗಾರಿ, ಬರಪರಿಹಾರ, ವಾಜಪೇಯಿ, ಗೃಹಭಾಗ್ಯ, ಸ್ವಚ್ಛಭಾರತ್ ಯೋಜನೆಯಡಿ ಸಹಾಯಧನ ಪಾವತಿ, ಜನಗಣತಿ ಸರ್ವೆಗೆ ವೆಚ್ಚ ಸೇರಿದಂತೆ ಇತರೆ ಪಾವತಿಗಳಿಗಾಗಿ ಹಣವನ್ನು ವೆಚ್ಚ ಮಾಡುವ ನಿರೀಕ್ಷೆ ಇದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಸಚಿವ ಜೆ.ಸಿ.ಮಾಧುಸ್ವಾಮಿ, ಮುಖ್ಯಾಧಿಕಾರಿ ಶ್ರೀನಿವಾಸ್, ಪುರಸಭಾಧ್ಯಕ್ಷೆ ಪುಷ್ಪ, ಉಪಾಧ್ಯಕ್ಷೆ ರೇಣುಕಾಗುರುಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.