ಹುಳಿಯಾರು: ಪಟ್ಟಣ ಸಮೀಪದ ಲಿಂಗಪ್ಪನಪಾಳ್ಯಯಲ್ಲಿ ರಾಮನವಮಿಯನ್ನು ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಲಿಂಗಪ್ಪನಪಾಳ್ಯದಲ್ಲಿ ಯುಗಾದಿ ಹಬ್ಬಕ್ಕಿಂತಲೂ ಅದ್ದೂರಿಯಾಗಿ ರಾಮನವಮಿ ಹಬ್ಬವನ್ನು ಆಚರಿಸುವುದು ವಿಶೇಷ. ಯುಗಾದಿ ತರುವಾಯ 9 ದಿನ ಗ್ರಾಮದ ದೇಗುಲದಲ್ಲಿ ವಿಶೇಷ ಪೂಜೆ, ರಾಮ ಭಜನೆ ನಡೆಯುತ್ತದೆ.

ಒಂದು ತಿಂಗಳು ಮಾಂಸಾಹಾರವನ್ನು ಗ್ರಾಮದಲ್ಲಿ ನಿಶಿದ್ಧಗೊಳಿಸಲಾಗುತ್ತದೆ. ಮಾಂಸಾಹಾರ ಸೇವನೆ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ಶುಕ್ರವಾರ ಮುಂಜಾನೆ ರಾಮ ದೇಗುಲದಲ್ಲಿನ ಮೂರ್ತಿಗಳಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗುತ್ತದೆ. ನಂತರ ಹುಳಿಯಾರು ಪಟ್ಟಣದಿಂದ ಆಂಜನೇಯಸ್ವಾಮಿ, ದುರ್ಗಾಪರಮೇಶ್ವರಿ, ಕೆಂಚಮ್ಮ ಹಾಗೂ ಹುಳಿಯಾರಮ್ಮ ದೇವತೆಗಳನ್ನು ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆ ತರುತ್ತಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಸ್ವಾಮಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನಡೆದು ನೂರೊಂದೆಡೆ ಸೇವೆ ಸಲ್ಲಿಸಲಾಯಿತು. ಗ್ರಾಮದಲ್ಲಿ ಪ್ರತಿಯೊಂದು ಮನೆಯಲ್ಲೂ ಹೋಳಿಗೆ ಊಟ ತಯಾರಿಸಿ ಹಬ್ಬ ಆಚರಿಸುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-17-1625966864

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.