ಕುಣಿಗಲ್: ಲಿಂಕ್ ಕೆನಾಲ್ನಿಂದ ತಾಲ್ಲೂಕಿಗೆ ನೇರವಾಗಿ ಹರಿದು ಬರುವ ಹೇಮಾವತಿ ನೀರು ಕುಣಿಗಲ್ ತಾಲ್ಲೂಕಿಗೆ ಮಾತ್ರ, ಮಾಗಡಿಗಲ್ಲ ಎಂದು ಶಾಸಕ ಡಾ.ರಂಗನಾಥ್ ಸ್ಪಷ್ಟಪಡಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ನಾಲಾ ಯೋಜನೆಯ ಮುಖ್ಯ ಉದ್ದೇಶ ತುಮಕೂರು ಜಿಲ್ಲೆ ಸೇರಿದಂತೆ ಕುಣಿಗಲ್ ತಾಲ್ಲೂಕಿನ 240 ಕಿಮೀವರೆಗೆ. ಹೇಮಾವತಿ ನಾಲಾ ಯೋಜನೆಗೆ ಶ್ರಮಿಸಿದ್ದ ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ ಅವರ ಕನಸು ಇದುವರೆಗೂ ಕನಸಾಗಿಯೇ ಉಳಿದಿದೆ. 25 ವರ್ಷಗಳಿಂದ ತಾಲ್ಲೂಕಿಗೆ ಹೇಮಾವತಿ ನೀರಿನ ವಿಚಾರದಲ್ಲಿ ಅನ್ಯಾಯವಾಗಿದೆ. ತಾಲ್ಲೂಕಿಗೆ ಮೂರು ಟಿಎಂಸಿ ನೀರು ನಿಗದಿಯಾಗಿದ್ದು, ಇದುವರೆಗೂ ಪಡೆಯಲು ಸಾಧ್ಯವಾಗಿಲ್ಲ. ಕುಣಿಗಲ್ ಕಡೆ ನಾಲೆಯಲ್ಲಿ ನೀರು ಹರಿದ ಕ್ಷಣವೇ ಗುಬ್ಬಿ, ತುರುವೇಕೆರೆ ರೈತರು ಮೋಟರ್ ಅಳವಡಿಸಿ ನೀರು ಪಡೆದುಕೊಳ್ಳುತ್ತಿದ್ದಾರೆ. ಕೆಲವೆಡೆ ನಾಲೆ ಒಡೆದು ನೀರು ಹರಿಸಿಕೊಳ್ಳುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ ಎಂದರು.

ತಾಲ್ಲೂಕಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಮತ್ತು ತಾಲ್ಲೂಕಿನ ಪಾಲಿನ ಮೂರು ಟಿಎಂಸಿ ನೀರನ್ನು ಯಾವುದೇ ಅಡ್ಡಿ, ಆತಂಕಗಳಿಲ್ಲದೆ ನೇರವಾಗಿ ಪಡೆಯುವ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಸಂಸದರಾಗಿದ್ದ ಡಿ.ಕೆ.ಸುರೇಶ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಶ್ರಮದ ಫಲವಾಗಿ ಮೊದಲ ಹಂತದಲ್ಲಿ ₹615 ಕೋಟಿ ವೆಚ್ಚದಲ್ಲಿ ಲಿಂಕ್ ಕೆನಾಲ್ ಯೋಜನೆ ಪ್ರಾರಂಭವಾಗಿದ್ದು, ಬಿಜೆಪಿ ಸರ್ಕಾರದಲ್ಲಿ ರಾಜಕೀಯ ಉದ್ದೇಶದಿಂದ ರದ್ದು ಮಾಡಲಾಗಿತ್ತು. ಡಿ.ಕೆ.ಶಿವಕುಮಾರ್ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಮತ್ತೂ ಲಿಂಕ್ ಕೆನಾಲ್ ಯೋಜನೆ ಶತಸಿದ್ದ ಎಂದು ಘೋಷಿಸಿದ್ದರು. ಜನರಿಗೆ ನೀಡಿದ ಭರವಸೆಯಂತೆ ಮತ್ತೆ ಲಿಂಕ್ ಕೆನಾಲ್ ಯೋಜನೆ ₹990 ಕೋಟಿ ವೆಚ್ಚದಲ್ಲಿ ಪ್ರಾರಂಭವಾಗಿದೆ ಎಂದರು.

ಯೋಜನೆ ಅನುಷ್ಠಾನಕ್ಕೂ ಮುಂಚೆ ನಡೆದ ನೀರಾವರಿ ಸಲಹ ಸಮಿತಿ ಸಭೆಗಳಲ್ಲಿ ಭಾಗವಹಿಸಿದ್ದ ಸಂಬಂಧಪಟ್ಟ ಕ್ಷೇತ್ರಗಳ ಜನಪ್ರತಿನಿಧಿಗಳಿಗೆ ತಾಲ್ಲೂಕಿಗಾಗಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡಿ ಮನವರಿಕೆ ಮಾಡಿದ ಸಮಯದಲ್ಲಿ ಎಲ್ಲರೂ ಮೌಖಿಕವಾಗಿ ಒಪ್ಪಿಗೆ ನೀಡಿದ್ದರು. ಆದರೆ ಜೆಡಿಎಸ್ ಮತ್ತು ಬಿಜೆಪಿ ಯವರು ಹೇಮಾವತಿ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಅಪಪ್ರಚಾರ ಮಾಡುತ್ತಿರುವ ಕಾರಣ ಪ್ರತಿಭಟನೆ ಮೂಲಕ ಲಿಂಕ್ ಕೆನಾಲ್ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು.

ಕಾವೇರಿ ಕೊಳ್ಳದ ನೀರು ಜಿಲ್ಲೆಯ ಕೃಷ್ಣ ಮೇಲ್ದಂಡೆ ವ್ಯಾಪ್ತಿಗೆ ಹರಿಯುವ ಸಮಯದಲ್ಲಿ ವಿರೋಧ ವ್ಯಕ್ತಪಡಿಸದವರು, ಕುಣಿಗಲ್ ಪಾಲಿನ ನೀರು ಪಡೆಯಲು ನಿರ್ಮಾಣವಾಗುತ್ತಿರುವ ಲಿಂಕ್ ಕೆನಾಲ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೇಮಾವತಿ ನಾಲಾ ಮೂಲ ಯೋಜನೆಯಲ್ಲಿಲ್ಲದ ಜಿಲ್ಲೆಯ ಇತರೆಡೆಗಳಿಗೆ ನೀರು ಹೋಗುವಾಗ ಕುಣಿಗಲ್ ತಾಲ್ಲೂಕಿನ ಜನ ವಿರೋಧ ವ್ಯಕ್ತಪಡಿಸದೆ ಸಹಕಾರ ನೀಡಿದ್ದಾರೆ ಎಂದರು.

ತುಮಕೂರು ಜಿಲ್ಲೆಗೆ ನಿಗಧಿಯಾಗಿರುವ 24 ಟಿಎಂಸಿ ನೀರಿಗಾಗಿ ಹೋರಾಟಕ್ಕೆ ಸಿದ್ಧವಾಗಿರವೆ, ಕುಣಿಗಲ್ ತಾಲ್ಲೂಕಿನ ಪಾಲಿನ ನೀರು ಪಡೆಯಲು ಅಡ್ಡಿ ಪಡಿಸಿದರೆ ತಾಲ್ಲೂಕಿನ ರೈತರ ಹಿತದೃಷ್ಟಿಯಿಂದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.