ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಪಟೂರು | ನಕಲಿ ಸಹಿ ಮಾಡಿ ಬ್ಯಾಂಕ್‌ನಿಂದ ಸಾಲ: ಅಪರಾಧಿಗೆ 12 ತಿಂಗಳು ಜೈಲು

Published : 24 ಸೆಪ್ಟೆಂಬರ್ 2024, 14:27 IST
Last Updated : 24 ಸೆಪ್ಟೆಂಬರ್ 2024, 14:27 IST
ಫಾಲೋ ಮಾಡಿ
Comments

ತಿಪಟೂರು: ನಕಲಿ ಸಹಿ ಮಾಡಿ ಬ್ಯಾಂಕ್‌ನಿಂದ ಸಾಲ ಪಡೆದು ವಂಚಿಸಿದ್ದ ಅಪರಾಧಿಗೆ 12 ತಿಂಗಳು ಸಜೆ ಮತ್ತು ₹20 ಸಾವಿರ ದಂಡ ವಿಧಿಸಲಾಗಿದೆ.

ತಾಲ್ಲೂಕಿನ ಹುಣಸೇಘಟ್ಟ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ನೊಣವಿನಕೆರೆ ಹೋಬಳಿ ಬಿದರೆಕೆರೆ ಗ್ರಾಮದ ಜಮೀನನ್ನು ಆಧಾರ ಮಾಡಿ ಸಾಲ ಪಡೆಯಲು ಜಯಮ್ಮ ಅವರ ಸಹಿಯನ್ನು ವರಲಕ್ಷ್ಮಿ ಅವರು ನಕಲು ಮಾಡಿದ್ದರು. ₹40 ಸಾವಿರ ಸಾಲ ಪಡೆದು ಜಯಮ್ಮ ಹಾಗೂ ಬ್ಯಾಂಕ್‌ಗೆ ವಂಚಿಸಿದ್ದರು.

ನೊಣವಿನಕೆರೆ ಪೊಲೀಸ್ ತನಿಖಾಧಿಕಾರಿ ಜಿ. ಕೃಷ್ಣರಾಜು ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಸಾಬೀತಾಗಿದ್ದು, ನ್ಯಾಯಧೀಶೆ ಜಿ.ಎಸ್. ಮಧುಶ್ರೀ ಪ್ರಕರಣದ ಆರೋಪಿಗಳಾದ ಟಿ.ಪಿ ಜಯರಾಮ್ ಮತ್ತು ವರಲಕ್ಷ್ಮಿ ಜಯರಾಮ್ ಅವರಿಗೆ ತಲಾ 12 ತಿಂಗಳು ಜೈಲು ₹20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ವಕೀಲೆ ಚೇತನ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT