ಕಡಿಮೆ ಬಡ್ಡಿದರದಲ್ಲಿ ಸಾಲ

7
ಚಿಕ್ಕಹಳ್ಳಿ ಗ್ರಾಮದಲ್ಲಿ ಕ್ಷೇತ್ರ ಭೇಟಿ ಮತ್ತು ರೈತರ ಜೊತೆ ಸಂವಾದದಲ್ಲಿ ಕೃಷ್ಣನ್ ಹೇಳಿಕೆ

ಕಡಿಮೆ ಬಡ್ಡಿದರದಲ್ಲಿ ಸಾಲ

Published:
Updated:
Prajavani

ತುಮಕೂರು: ರೈತರ ಅಭಿವೃದ್ಧಿಗಾಗಿ ಸಿಂಡಿಕೇಟ್‌ ಬ್ಯಾಂಕ್‌ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಿಂಡಿಕೇಟ್ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕ ಕೃಷ್ಣನ್ ತಿಳಿಸಿದರು.

ತಾಲ್ಲೂಕಿನ ಚಿಕ್ಕಹಳ್ಳಿ ಗ್ರಾಮದಲ್ಲಿ ಸಿಂಡಿಕೇಟ್ ಬ್ಯಾಂಕ್ ಮತ್ತು ಇನಿಶಿಯೇಟಿವ್ ಫಾರ್ ಡೆವಲಪ್‌ಮೆಂಟ್ ಫೌಂಡೇಷನ್ ಆಶ್ರಯದಲ್ಲಿ ನಡೆದ ಕ್ಷೇತ್ರ ಭೇಟಿ ಮತ್ತು ರೈತರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರಿಗೆ ಮನೆ ಬಾಗಿಲಿಗೆ ಬ್ಯಾಂಕ್ ಸೌಲಭ್ಯವನ್ನು ನೀಡುತ್ತಿದೆ. ಈ ಅವಕಾಶ ಉಪಯೋಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

ಬ್ಯಾಂಕ್ ಅಧಿಕಾರಿ ಮಂಜುನಾಥ್, ’ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಬ್ಯಾಂಕ್ ಸದಾ ಸಿದ್ಧ ಇದೆ’ ಎಂದರು.

ಐಡಿಎಫ್ ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ವಿವೇಕಾನಂದ ಎನ್.ಸಾಲಿಮಠ್ ಮಾತನಾಡಿ, ‘ಐಡಿಎಫ್ ಸಂಸ್ಥೆಯು ಸಿಂಡಿಕೇಟ್ ಬ್ಯಾಂಕ್ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಲ ಸೌಲಭ್ಯವನ್ನು ನೀಡುತ್ತಿದೆ. ಈ ಸಾಲವನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಮಟ್ಟ ವೃದ್ಧಿಸಿಕೊಳ್ಳಬೇಕು’ ಎಂದರು.

ಬ್ಯಾಂಕ್ ಅಧಿಕಾರಿ ಶಾಮೇಶ್ವರ, ಐಡಿಎಫ್ ಸಂಸ್ಥೆ ಕಾರ್ಯಕಾರಿ ಟ್ರಸ್ಟಿ ಶ್ರೀಕಾಂತ ಶೆಣೈ, ಕೆಂಪೇಗೌಡ, ಎಸ್.ಬಿ.ಪಾಟೀಲ್, ಬಿ.ಸಂಗಪ್ಪ, ಗುರುದತ್, ತಾಲ್ಲೂಕು ಸಂಯೋಜಕರಾದ ಕೆ.ಎನ್.ಸುರೇಶ್, ಅರುಣ್‌ಗೌಡ, ಕಂಪನಿಯ ನಿರ್ದೇಶಕ ಸಿದ್ದಲಿಂಗಪ್ಪ, ವ್ಯವಸ್ಥಾಪಕ ತಿಮ್ಮರಾಜು, ಡಿ.ಲೋಕೇಶ್, ಪ್ರಗತಿ ರೈತ ವೀರಭದ್ರಯ್ಯ, ರುದ್ರಯ್ಯ ಹಾಗೂ ವೀರೂಪಾಕ್ಷಯ್ಯ ಇದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !