ಸ್ಥಳೀಯ ಸಂಸ್ಥೆ ಚುನಾವಣೆ; ಕೊರಟಗೆರೆಯಲ್ಲಿ 8 ನಾಮಪತ್ರ ಸಲ್ಲಿಕೆ

7
ತುಮಕೂರು ಮಹಾನಗರ ಪಾಲಿಕೆಯಲ್ಲಿ ನಾಮಪತ್ರ ಸಲ್ಲಿಕೆ ಆರಂಭ, ಪಾಲಿಕೆ ಕಚೇರಿಗೆ ಬಿಗಿ ಬಂದೋಬಸ್ತ್

ಸ್ಥಳೀಯ ಸಂಸ್ಥೆ ಚುನಾವಣೆ; ಕೊರಟಗೆರೆಯಲ್ಲಿ 8 ನಾಮಪತ್ರ ಸಲ್ಲಿಕೆ

Published:
Updated:
Deccan Herald

ತುಮಕೂರು: ಮಧುಗಿರಿ ಮತ್ತು ಚಿಕ್ಕನಾಯಕನಹಳ್ಳಿ ಪುರಸಭೆ ಹಾಗೂ ಗುಬ್ಬಿ ಮತ್ತು ಕೊರಟಗೆರೆ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆ.10ರಿಂದಲೇ ಆರಂಭಗೊಂಡಿದ್ದು, ತುಮಕೂರು ಮಹಾನಗರ ಪಾಲಿಕೆಗೆ ಸೋಮವಾರ(ಆ.13) ರಿಂದ ಪ್ರಾರಂಭವಾಗಿದೆ.

ಪಟ್ಟಣ ಪಂಚಾಯಿತಿ, ಪುರಸಭೆಗಳಿಗೆ ನಾಮಪತ್ರ ಸಲ್ಲಿಕೆ ಆ.10ರಂದೇ ಆರಂಭವಾಗಿದ್ದರೂ ಸೋಮವಾರದವರೆಗೆ ಒಂದೂ ನಾಮಪತ್ರ ಸಲ್ಲಿಕೆ ಆಗಿರಲಿಲ್ಲ. ಸೋಮವಾರ ಕೊರಟಗೆರೆ ಪಟ್ಟಣ ಪಂಚಾಯಿತಿಗೆ ಮಾತ್ರ 8 ನಾಮಪತ್ರ ಸಲ್ಲಿಕೆ ಆಗಿವೆ.ಇನ್ನುಳಿದ ಕಡೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.

ಅರ್ಜಿ ಸ್ವೀಕಾರಕ್ಕೆ ಉತ್ಸಾಹ: ತುಮಕೂರು ಮಹಾನಗರ ಪಾಲಿಕೆಗೆ ನಾಮಪತ್ರ ಅರ್ಜಿಗಳನ್ನು 6 ಕೊಠಡಿಗಳಲ್ಲಿ ಚುನಾವಣಾಧಿಕಾರಿಗಳು ವಿತರಿಸಲು ಸೋಮವಾರ ಪ್ರಾರಂಭಿಸಿದರು.

ಆಕಾಂಕ್ಷಿಗಳು ಪಾಲಿಕೆಗೆ ಬಂದು ಸಂಬಂಧಪಟ್ಟ ವಾರ್ಡಿನ ಕೊಠಡಿಗೆ ತೆರಳಿ ಸ್ವೀಕರಿಸಿದರು.

ಪೊಲೀಸ್ ಬಂದೋ ಬಸ್ತ್; ಚುನಾವಣೆ ಪ್ರಯುಕ್ತ ಪಾಲಿಕೆ ಆಡಳಿತ ಕಚೇರಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಟೌನಾ ಹಾಲ್‌ ಕಡೆಯಿಂದ ಆಡಳಿತ ಕಚೇರಿ ಕಡೆಗೆ ಹೋಗುವ ಕಡೆ ನಾಕಾ ಬಂದಿ ಹಾಕಲಾಗಿದೆ. ಆವರಣದ ಟ್ಯಾಂಕ್‌ ಕಡೆಯಿಂದ ಬರುವ ಕಡೆಗೂ ನಾಕಾ ಬಂದಿ ಹಾಕಲಾಗಿದೆ.

ವಿವಿಧ ವಾರ್ಡ್‌ಗಳಿಗೆ ನೇಮಿಸಿದ ಚುನಾವಣಾಧಿಕಾರಿಗಳ ವಿವರ:

ವಾರ್ಡ್‌ –1ರಿಂದ 5ಕ್ಕೆ ಚುನಾವಣಾಧಿಕಾರಿಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಟೇಸ್ವಾಮಿ,ಸಹಾಯಕ ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆ.ವಿನಯ್‌ಕುಮಾರ್ ನೇಮಿಸಲಾಗಿದೆ.

6ರಿಂದ 10ನೇ ವಾರ್ಡ್‌ಗೆ ಕೃಷಿ ಇಲಾಖೆ ಉಪನಿರ್ದೇಶಕ ಎನ್.ರಮೇಶ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಟಿ.ಜೆ.ಮಹಾಲಕ್ಷ್ಮಿ, 10ರಿಂದ 15ನೇ ವಾರ್ಡಿಗೆ ಸಹಕಾರ ಸಂಘಗಳ ಉಪನಿಬಂಧಕ ಜಿ.ಆರ್.ವಿಜಯಕುಮಾರ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಅವರನ್ನು ನೇಮಿಸಲಾಗಿದೆ.

16ರಿಂದ 20ನೇ ವಾರ್ಡಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಂಗೇಗೌಡ, ಸಹಾಯಕ ಕೃಷಿ ನಿರ್ದೇಶಕ ಡಾ.ಚಂದ್ರಕುಮಾರ್ ಎಚ್.ಎಲ್, 21ರಿಂದ 25ನೇ ವಾರ್ಡಿಗೆ ನಗರ ಮತ್ತು ಪಟ್ಟಣ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಮುರಳೀಧರ, ತಹಶೀಲ್ದಾರ್ ಕೆ.ಆರ್.ನಾಗರಾಜು ಅವರನ್ನು ನೇಮಿಸಲಾಗಿದೆ.

26ರಿಂದ 30ನೇ ವಾರ್ಡ್‌ಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕ ಎಂ.ಮುರಳೀಧರ, ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ಎಂ.ಗುರುಪ್ರಸಾದ್, 31ರಿಂದ 35ಕ್ಕೆ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಎಸ್.ವಿರೂಪಾಕ್ಷ, ಕೃಷಿ ಅಧಿಕಾರಿ ಅಶ್ವತ್ಥ್ ನಾರಾಯಣ ವೈ ಅವರನ್ನು ನೇಮಕ ಮಾಡಲಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !