ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಕೆಲವು ದಿನಗಳಿಂದ ಅಡುಗೆ ಅನಿಲ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಆಕ್ರೋಶಗೊಂಡ ನೂರಾರು ಗ್ರಾಹಕರು ಗುರುವಾರ ಸ್ಥಳೀಯ ಗ್ಯಾಸ್ ಏಜೆನ್ಸಿ ಕಚೇರಿಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ನಿವಾಸಿ ಅಂಬಿಕಾ ಮಾತನಾಡಿ, ಸಿಲಿಂಡರ್ ಬುಕ್ ಮಾಡಿ ನಾಲ್ಕು ದಿನ ಕಳೆದಿವೆ. ವಿತರಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ, ‘ಇನ್ನೂ ಒಂದು ವಾರ ಅಥವಾ ಎರಡು ವಾರ ಕಾಯಬೇಕು’ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಮನೆಯಲ್ಲಿ ಅಡುಗೆ ತಯಾರಿಸಲು ಅನಿಲವಿಲ್ಲದೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದರು.

ಶೆಟ್ಟಿಕೆರೆ ನಿವಾಸಿ ಭಾಗ್ಯ ಮಾತನಾಡಿ, ಸಿಲಿಂಡರ್ ವಿತರಣೆ ಮಾಹಿತಿ ಪಡೆಯಲು ಪಟ್ಟಣದ ಮುಖ್ಯ ಕಚೇರಿಗೆ ಅಲೆದಾಡುತ್ತಿದ್ದೇವೆ. ಅಲ್ಲಿಗೆ ಹೋದರೆ ‘ದಾಸ್ತಾನು ಇಲ್ಲ’ ಎಂಬ ಫಲಕ ನೇತುಹಾಕಿದ್ದಾರೆ. ಈ ಅನಿಶ್ಚಿತತೆಯ ನಡುವೆ ಏನು ಮಾಡಬೇಕೆಂದು ತಿಳಿಯದಾಗಿದೆ ಎಂದರು.

ಪಟ್ಟಣದ ನಿವಾಸಿ ಗೋಪಿ ಮಾತನಾಡಿ, ಸಾಮಾನ್ಯ ಗ್ರಾಹಕರಿಗೆ ನ್ಯಾಯಯುತವಾಗಿ ತಲುಪಬೇಕಾದ ಸಿಲಿಂಡರ್ಗಳನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಜನರಿಗೆ ‘ದಾಸ್ತಾನು ಇಲ್ಲ’ ಎಂಬ ಸಬೂಬು ಹೇಳಲಾಗುತ್ತಿದೆ ಎಂದರು.

ಗ್ಯಾಸ್ ಏಜೆನ್ಸಿಯ ಆದರ್ಶ್ ಪ್ರತಿಕ್ರಿಯಿಸಿ, ಪ್ರಸ್ತುತ ಪಟ್ಟಣದಲ್ಲಿ 2,500ಕ್ಕೂ ಹೆಚ್ಚು ಸಿಲಿಂಡರ್ ಬುಕಿಂಗ್ಗಳು ಬಾಕಿ ಇವೆ. ಆದರೆ ಕೇವಲ 342 ಸಿಲಿಂಡರ್ಗಳು ಮಾತ್ರ ಪೂರೈಕೆಯಾಗಿವೆ. ದಾಸ್ತಾನು ಬರದ ಕಾರಣ ಸಮಸ್ಯೆ ಉಂಟಾಗಿದೆ. ಜನರು ಅಭಾವ ಉಂಟಾಗಬಹುದೆಂಬ ಆತಂಕದಿಂದ ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್ ಮಾಡುತ್ತಿದ್ದಾರೆ. ಸದ್ಯ ಲಭ್ಯವಿರುವ ಸಿಲಿಂಡರ್ಗಳನ್ನು ಜೇಷ್ಠತೆ ಆಧಾರದ ಮೇಲೆ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪೂರೈಕೆ ಸಹಜ ಸ್ಥಿತಿಗೆ ಬರಲಿದ್ದು, ಎಲ್ಲರಿಗೂ ಸಿಲಿಂಡರ್ ದೊರೆಯಲಿದೆ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.