ಮಧುಗಿರಿ: ಪುಲಮಾಚಿ ಗ್ರಾಮದ ಬಳಿ 5 ಕರಡಿಗಳು ಪ್ರತ್ಯಕ್ಷ

ಮಧುಗಿರಿ: ತಾಲ್ಲೂಕಿನ ಪುಲಮಾಚಿ ಗ್ರಾಮದ ಸಮೀಪವಿರುವ ಭೂತಪ್ಪ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಬೆಳಿಗ್ಗೆ
5 ಕರಡಿಗಳು ಕಾಣಿಸಿಕೊಂಡಿವೆ.
ಆಹಾರ ಹುಡುಕುತ್ತಿರುವುದನ್ನು ಗ್ರಾಮದ ಯುವಕರು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಕರಡಿಗಳು ಪ್ರತ್ಯಕ್ಷವಾಗಿರುವ ವಿಚಾರ ಗ್ರಾಮದ ಜನರಿಗೆ ತಿಳಿಸಿ, ದೇವಾಲಯದ ಸಮೀಪ ಯಾರು ಹೋಗದಂತೆ ಮನವಿ ಮಾಡಲಾಗಿದೆ.
ಒಂದೇ ಬಾರಿಗೆ ಇಷ್ಟೊಂದು ಕರಡಿಗಳು ಪ್ರತ್ಯಕ್ಷವಾಗಿರುವುದು ಇದೇ ಮೊದಲು. ಕರಡಿಗಳನ್ನು ನೋಡಿದ ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಕರಡಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಲವು ದಿನಗಳ ಹಿಂದೆಯೇ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಈ ಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರವಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.