ಮಧುಗಿರಿ: ತಾಲ್ಲೂಕಿನಲ್ಲಿ ಹಾದು ಹೋಗುವ ಪಾವಗಡ -ಮಳವಳ್ಳಿ ನಡುವಿನ ರಾಜ್ಯ ಹೆದ್ದಾರಿ ಪಟ್ಟಣದ ಹೊರವಲಯದಲ್ಲಿ (ಬೈಪಾಸ್) ಹಾದು ಹೋಗುತ್ತದೆ. ಈ ಬೈಪಾಸ್ ರಸ್ತೆಯ ಬದಿಗಳಲ್ಲಿ ಬೆಳೆದಿರುವ ಮುಳ್ಳುಕಂಟಿಗಳು ರಸ್ತೆಯ ದ್ವಿಚಕ್ರ ವಾಹನ ಪಥದ ಜಾಗವನ್ನು ಆವರಿಸಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ.

ಕಸಬ ಹೋಬಳಿಯ ಬಸವನಹಳ್ಳಿಯಲ್ಲಿನ ಕೆಎಸ್ಆರ್ಟಿಸಿ ಬಸ್ ಡಿಪೊ ಬಳಿ ಆರಂಭವಾಗುವ ಬೈಪಾಸ್ ರಸ್ತೆ ತುಮಕೂರು ಕಡೆ ಇರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಬಳಿ ಅಂತ್ಯವಾಗುತ್ತದೆ. ಬೈಪಾಸ್ ಅಂಚಿನಲ್ಲಿ ಭಕ್ತರಹಳ್ಳಿ, ವಡೇರಹಳ್ಳಿ, ಬಿಜವರ ಗ್ರಾಮಗಳ ಹಾಗೂ ಹಿಂದೂಪುರ ಕಡೆಯ ರಸ್ತೆ ಮತ್ತು ಗೌರಿಬಿದನೂರು ಕಡೆಯ ರಸ್ತೆಗಳು ಕೂಡಿಕೊಳ್ಳುತ್ತವೆ. ಈ ಕೂಡು ರಸ್ತೆಗಳ ಕಡೆಯಿಂದ ಬರುವ ವಾಹನಗಳನ್ನು ಗುರುತಿಸಲು ಸಾಧ್ಯವಾಗದಂತೆ ಮುಳ್ಳುಕಂಟಿಗಳು ಆವರಿಸಿವೆ.

ಸೀಮೆಜಾಲಿ, ಎಲಚಿ ಹಣ್ಣಿನ ಗಿಡ, ಎಕ್ಕದ ಗಿಡ, ಲಂಟಾನ ಸೇರಿದಂತೆ ಹಲವು ಮುಳ್ಳು ಜಾತಿಯ ಗಿಡಗಳು ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡುತ್ತಿವೆ. ರಾತ್ರಿ ಸಂಚಾರಿಸುವಾಗ ರಸ್ತೆ ಅಂಚಿನಲ್ಲಿ ಚಲಿಸುವವರಿಗೆ ಈ ಮುಳ್ಳುಗಳಿಂದ ತರಚಿದ ಗಾಯಗಳಾಗಿವೆ. ಕೆಶಿಪ್ ಅಧಿಕಾರಿಗಳು ಗಮನ ಹರಿಸದಿರುವುದರ ಪರಿಣಾಮ ಈ ಮುಳ್ಳುಗಂಟಿಗಳು ಹೆದ್ದಾರಿಗೆ ಅಳವಡಿಸಿರುವ ಲೋಹದ ತಡೆಗಳನ್ನು ಸೀಳಿಕೊಂಡು ರಸ್ತೆಗೆ ಚಾಚಿಕೊಳ್ಳುತ್ತಿವೆ.

ರಸ್ತೆ ಬದಿಯ ಮುಳ್ಳುಗಂಟಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-17-578417992

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.