ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿ ಬೆನಕನಹಳ್ಳಿ- ಮಿಡಿಗೇಶಿ ಬಳಿಯ ಹೊಂಡಕ್ಕೆ ನೀರು ಕುಡಿಯಲು ಹೋದ ಕಸಾಪುರ ಗ್ರಾಮದ ಅಕ್ಕ– ತಮ್ಮ ಕಾಲುಜಾರಿ ಹೊಂಡಕ್ಕೆ ಬಿದ್ದು ಭಾನುವಾರ ಮೃತಪಟ್ಟಿದ್ದಾರೆ.

ಮಿಡಿಗೇಶಿ ಹೋಬಳಿ ಕಸಾಪುರ ಗ್ರಾಮದ ಮಂಜುನಾಥ ಎಂಬುವವರ ಮೂವರು ಮಕ್ಕಳು ಮೇಕೆ ಮೇಯಿಸಲು ಹೋಗಿದ್ದರು. ಅಲ್ಲಿ ನೀರು ಕುಡಿಯಲು ಹೋದಾಗ ಮೊದಲು ರವೀಂದ್ರ (9) ಕಾಲುಜಾರಿ ಹೊಂಡಕ್ಕೆ ಬಿದ್ದಿದ್ದಾನೆ. ತಮ್ಮನನ್ನು ರಕ್ಷಿಸಲು ಹೋಗಿ ಅಕ್ಕ ಸುಚಿತ್ರಾ (11) ಕೂಡಾ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾಳೆ. ಮತ್ತೊಬ್ಬ ಮಗಳು ಪೋಷಕರನ್ನು ಕರೆ ತರುವಷ್ಟರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.