ಮಧುಗಿರಿ: ‘ಸ್ವಚ್ಛಗೊಳಿಸದ ಚರಂಡಿಯಿಂದಾಗಿ ಮೂಗು ಮುಚ್ಚಿಕೊಂಡರೆ ಮಾತ್ರ ಕೇರಿಯೊಳಗೆ ಓಡಾಡಬೇಕಾದ ಸ್ಥಿತಿ ಇದೆ. ಇದರಿಂದ ನಮ್ಮ ಮನೆಗೆ ಯಾವ ನೆಂಟರು ಬರುವುದಿಲ್ಲ’ ಎಂದು ತಾಲ್ಲೂಕಿನ ಪುರವರ ಹೋಬಳಿ ಕೊಡ್ಲಾಪುರ ಪಂಚಾಯಿತಿ ವ್ಯಾಪ್ತಿಯ ಗಿರೇಗೌಡನಹಳ್ಳಿಯ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ಗ್ರಾಮದ ಹೃದಯ ಭಾಗದಲ್ಲಿರುವ ಕೃಷ್ಣಾನಾಯ್ಕರ ಮನೆಯಿಂದ ಶಾಲಾ ಕಾಂಪೌಂಡ್ ಗೋಡೆಯವರೆಗೆ ಇರುವ ಕೇರಿಯಲ್ಲಿನ ಚರಂಡಿ ಕಸ, ತ್ಯಾಜ್ಯದಿಂದ ತುಂಬಿದ್ದು, ದುರ್ವಾಸನೆ ಬೀರುತ್ತಿದೆ. ಜನರೆಲ್ಲರೂ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.

ಚರಂಡಿ ಪಕ್ಕದಲ್ಲಿಯೇ ಇರುವ ನಲ್ಲಿ ಹಾಳಾಗಿದ್ದು, ತಾತ್ಕಾಲಿಕವಾಗಿ ಜೋಡಿಸಿರುವ ಪೈಪ್ನಲ್ಲಿ ಬರುವ ನೀರನ್ನೇ ವಿಧಿಯಿಲ್ಲದೇ ಬಳಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಊರಿನ ಬಹುತೇಕ ಚರಂಡಿಗಳು ಸ್ವಚ್ಛಗೊಂಡಿಲ್ಲ. ಶನಿಮಹಾತ್ಮ ದೇವಾಲಯದ ಬಳಿ ಚರಂಡಿ ಮುಚ್ಚಿದ್ದು, ನೀರು ರಸ್ತೆ ಮೇಲೆ ಹರಿಯುತ್ತಿದೆ. ಗ್ರಾಮದ ಸಮಸ್ಯೆಗಳನ್ನು ಕೇಳುವವರೇ ಇಲ್ಲ. ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲಿಸಿಲ್ಲ. ಈ ಬಗ್ಗೆ ಪಂಚಾಯಿತಿ ಸದಸ್ಯರನ್ನು ಕೇಳಿದರೆ, ‘ನಮ್ಮ ಆಡಳಿತ ಮುಗಿದಿರುವುದರಿಂದ ನಮ್ಮ ಮಾತನ್ನು ಯಾರೂ ಕೇಳುವುದಿಲ್ಲ’ ಎಂದು ಉತ್ತರಿಸುತ್ತಾರೆ. ಸಂಜೆಯಾದರೆ ಸೊಳ್ಳೆಗಳ ಕಾಟ ವಿಪರೀತವಾಗುವುದು. ವೃದ್ಧರು, ಮಕ್ಕಳು, ಬಾಣಂತಿಯರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಆದ್ದರಿಂದ ಕೂಡಲೇ ಚರಂಡಿಗಳ ಸ್ವಚ್ಛತೆ ನಡೆಸಿ, ಕಸ ತೆರವು ಕಾರ್ಯಕೈಗೊಂಡು, ಕನಿಷ್ಠ ಬ್ಲೀಚಿಂಗ್ ಪೌಡರ್ ಸಿಂಪಡಿಸುವಂತೆ ಅಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-17-1547995864

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.