ಮಧುಗಿರಿ: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಗೋಮಾಳವನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಅಡವಿನಾಗೇನಹಳ್ಳಿ ಗ್ರಾಮಸ್ಥರು ಪಟ್ಟಣದ ತಾಲ್ಲೂಕು ಕಚೇರಿ ಅವರಣದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ನಂತರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೊಡಿಗೇನಹಳ್ಳಿ ಹೋಬಳಿ ಅಡವಿನಾಗೇನಹಳ್ಳಿಯಲ್ಲಿ ನಾಲ್ಕು ಎಕರೆ 28 ಗುಂಟೆ ಜಮೀನಿನ ಖಾತೆ ಮಾಡುವುದರ ಬದಲಿಗೆ ಗೋಮಾಳದ ಜಮೀನು ಸೇರಿ 18 ಎಕರೆ 27 ಗುಂಟೆ ಭೂಮಿಯನ್ನು ಖಾತೆ ಮಾಡಿಸಿಕೊಳ್ಳಲಾಗಿದೆ ಎಂದು ಪ್ರತಿಭಟನಕಾರರು ದೂರಿದರು.

‘ಗ್ರಾಮದಲ್ಲಿ 200 ಮನೆಗಳಿದ್ದು ಎಲ್ಲಾ ಕುಟುಂಬಗಳು ಒಣಬೇಸಾಯ ಮತ್ತು ಹೈನುಗಾರಿಕೆ ಅವಲಂಬಿಸಿದ್ದಾರೆ. ನೂರಾರು ವರ್ಷಗಳಿಂದ ಎಮ್ಮೆ, ಕುರಿ, ಆಡು ಮೇಯಿಸುತ್ತಿದ್ದ ಜಾಗಕ್ಕೆ ಒಮ್ಮೆಲೆ ಬೇಲಿ ಹಾಕಲು ಹೊರಟಿದ್ದಾರೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಹೋರಾಟದ ಹಾದಿ ತುಳಿಯಬೇಕಾಗಿದೆ’ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಹತ್ತಾರು ಎಕರೆ ಜಮೀನು ಹೊಂದಿರುವವರೇ ಗೋಮಾಳವನ್ನು ಅಧಿಕಾರಿಗಳ ಸಹಾಯದಿಂದ ತಮ್ಮ ಹೆಸರಿಗೆ ಮಾಡಿಸಿಕೊಂಡಿರುವುದು ಊರಿನ ಬಡ ಜನರಿಗೆ ಮಾಡಿರುವ ದೊಡ್ಡ ಅನ್ಯಾಯ’ ಎನ್ನುತ್ತಾರೆ ಸ್ಥಳೀಯರಾದ ಲಕ್ಷ್ಮೀಪತಿ.

ಸ್ಥಳೀಯರಾದ ಎ.ಪಿ.ಗಂಗಾಧರ್, ಎ.ಟಿ.ನರಸಿಂಹಮೂರ್ತಿ, ಡಿ.ಕೆ.ಶ್ರೀನಿವಾಸ್, ರಮೇಶ್, ಗಂಗಾಧರ್, ಎಸ್.ಕೆ.ರಂಗನಾಥ್, ಲಕ್ಷ್ಮೀಪತಿ, ಆನಂದ್, ಎನ್.ಎಲ್.ರಾಮಾನಂದ, ರಾಜಕುಮಾರ, ಸಾವಿತ್ರಮ್ಮ, ಹನುಮಕ್ಕ, ಗೀತಾ, ರಾಧಮ್ಮ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-17-1246539225

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.