ಮಧುಗಿರಿ: ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.

ತಾಲ್ಲೂಕಿನ ಹಲವು ಗ್ರಾಮಗಳಿಂದ ಬಂದ 275ಕ್ಕೂ ಹೆಚ್ಚು ಮಂದಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಬಳಿ ಹೇಳಿಕೊಂಡರು. ಕೆಲವು ಜನರು ತಮ್ಮ ನೋವು ಹೇಳಿಕೊಂಡು ಜಿಲ್ಲಾಧಿಕಾರಿ ಎದುರು ಕಣ್ಣೀರು ಹಾಕಿದ ಪ್ರಸಂಗವೂ ಜರುಗಿತು.

ಈ ಸಂದರ್ಭದಲ್ಲಿ ಅಸಮಾಧಾನಗೊಂಡ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡ ಅವರು, ‘ನೀವು ಏಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೆಲಸ ಮಾಡಲು ನಿಮಗೆ ಏನಾಗಿದೆ. ಟೈಂಪಾಸ್ ಮಾಡಲು ಕಚೇರಿಗೆ ಬರುತ್ತೀರಿಯೇ’ ಎಂದು ತರಾಟೆಗೆ ತೆಗೆದುಕೊಂಡರು.

ಕೊಡಿಗೇನಹಳ್ಳಿ ಹೋಬಳಿಯ ವೆಂಗಳಮ್ಮನಹಳ್ಳಿಯಲ್ಲಿ ನಮಗೆ 2.20 ಎಕರೆ ಜಮೀನು ಇದೆ. ಆದರೆ, ಕೆಲವು ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ಪಕ್ಕದ ಜಮೀನಿನವರು ನನ್ನ ಜಮೀನು ತಮ್ಮದು ಎಂದು ಹೇಳಿ, ಗಲಾಟೆ ಮಾಡುತ್ತಿದ್ದಾರೆ. ಈಗ ವಿಷ ಕುಡಿಯುವುದೊಂದೇ ತಮಗಿರುವ ದಾರಿ ಎಂದು ರೈತ ಗಂಗಾಧರಯ್ಯ ಎಂಬುವರು ಅಳಲು ತೋಡಿಕೊಂಡರು. ಅದೇ ರೀತಿ ಮಿಡಿಗೇಶಿ ಹೋಬಳಿಯ ಪಡಸಾಲಟ್ಟಿ ಗ್ರಾಮದ ಗಂಗಮ್ಮ ಎಂಬುವರು, ತನ್ನ ಗಂಡ ಹಲವು ವರ್ಷಗಳ ಹಿಂದೆ ಕಾಯಿಲೆಯಿಂದ ತೀರಿಕೊಂಡಿದ್ದು, ನನ್ನ ಮಗ ಓದುತ್ತಿದ್ದಾನೆ. ತಮಗೆ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.

ತಮ್ಮ ಜಮೀನಿನ ಇ–ಸ್ವತ್ತು ಮಾಡಿಕೊಡದೆ ಹಲವು ವರ್ಷಗಳಿಂದ ಪಿಡಿಒ ಮತ್ತು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ದೊಡ್ಡೇರಿ ಹೋಬಳಿಯ ಸೋದೇನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಹೇಳಿದರು. ಕಂದಾಯ ಇಲಾಖೆಯಲ್ಲಿ ಪಹಣಿ, ಖಾತೆ, ಇ–ಸ್ವತ್ತು, ನಿವೇಶನ, ಗ್ರಾಮಗಳಲ್ಲಿ ಲಿಕ್ಕರ್ ಸಮಸ್ಯೆ, ಒತ್ತುವರಿ, ಪೊಲೀಸ್ ದೂರು ಸೇರಿದಂತೆ ಇನ್ನೂ ಹತ್ತಾರು ದೂರುಗಳು ಬಂದಿದ್ದವು.

ಅರ್ಜಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಈ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್, ಇಒ ಲಕ್ಷ್ಮಣ್ ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಏಪ್ರಿಲ್ 3 ಕ್ಕೆ ಮುಖ್ಯಮಂತ್ರಿ ಮಧುಗಿರಿಗೆ

ಏಪ್ರಿಲ್ 3 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧುಗಿರಿ ತಾಲ್ಲೂಕಿಗೆ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಆಗಮಿಸುತ್ತಿರುವುದರಿಂದ ಇವತ್ತು ಬೆಳಿಗ್ಗೆಯಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಪೂರ್ವಬಾವಿ ಸಭೆ ಮಾಡಲಾಗಿದೆ. ಕರ್ತವ್ಯ ಯಾವ ರೀತಿ ಸಿದ್ದತೆ ಮಾಡಬೇಕು ಕಾರ್ಯಕ್ರಮ ಯಾವ ರೀತಿ ಯಶಸ್ವಿ ಮಾಡಬೇಕು ಜನರಿಗೆ ಸರ್ಕಾರದಿಂದ ಏನೇನು ಅಭಿವೃದ್ದಿ ಕಾಮಗಾರಿಗಳಾಗುತ್ತಿದೆ ಮತ್ತು ಅವರಿಗೆ ಒಳ್ಳೆಯ ರೀತಿಯಲ್ಲಿ ತಲುಪಬೇಕು ಎಂಬುವುದೇ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಆಶಯ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.