ಮಧುಗಿರಿ: ‘ಮಾತೃಬಾಷೆ ಕನ್ನಡ ಹೃದಯದಲ್ಲಿರಲಿ, ಅನ್ಯಭಾಷೆ ನಾಲಿಗೆಯಲ್ಲಿರಲಿ’ ಎಂದು ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.

ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದಿಂದ ನಡೆದ 70ನೇ ರಾಜ್ಯೋತ್ಸವದಲ್ಲಿ ಮಾತನಾಡಿದರು.

‘ಕನ್ನಡದ ಬಗ್ಗೆ ಅಭಿಮಾನ ಇರಲಿ. ಕ್ಷುಲ್ಲಕ ಕಾರಣಗಳಿಗೆ, ಯಾವುದೇ ಧರ್ಮದ ಬಗ್ಗೆ ದ್ವೇಷ ಬೇಡ. ಪರಬಾಷೆಗಳ ಬಗ್ಗೆ ದ್ವೇಷ ಬೇಡ. ಇತರೆ ಬಾಷೆ ಕಲಿಕೆಗೆ ವಿರೋಧ ಬೇಡ. ಎಲ್ಲ ಬಾಷೆಗಳನ್ನು ಕಲಿಯದಿದ್ದರೆ ಬೇರೆ ಪ್ರದೇಶಗಳಿಗೆ ಹೋದರೆ ಅಲ್ಲಿನ ಬಾಷೆಯ ಬಗ್ಗೆ ತಿಳಿವಳಿಕೆ ಇಲ್ಲದಿದ್ದರೆ ತೊಂದರೆಗೊಳಗಾಗಲಿದ್ದು, ಎಲ್ಲ ಬಾಷೆಗಳನ್ನು ಕಲಿಯೋಣ, ಕನ್ನಡವನ್ನು ಹೃದಯದಲ್ಲಿಟ್ಟುಕೊಳ್ಳೋಣ’ ಎಂದರು

ಉಪವಿಭಾಗಾಧಿಕಾರಿ ಗೊಟೋರು ಶಿವಪ್ಪ ಮಾತನಾಡಿ, ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಯದ ದೇಶ ರಾಷ್ಟ್ರವಾಗಲಾರದು. ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನ್ ಪೂರ್ಣಯ್ಯ, ಮಿರ್ಜಾ ಇಸ್ಮಾಯಿಲ್, ಸರ್.ಎಂ. ವಿಶ್ವೇಶ್ವರಯ್ಯ ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಕನ್ನಡದ ಪ್ರಾಚೀನ ಕವಿಗಳಾದ ಪಂಪ, ರನ್ನ, ಪೊನ್ನ ಶಿವಕೋಟ್ಯಚಾರ್ಯ, ಕುಮಾರವ್ಯಾಸ, ರಾಘವಾಂಕ, ಜನ್ನ, ಸರ್ವಜ್ಞ ಮುಂತಾದವರು ಕನ್ನಡದ ದಾರಿ ದೀಪಕರಾಗಿದ್ದಾರೆ ಎಂದರು.

ತಹಶೀಲ್ದಾರ್ ಶ್ರೀನಿವಾಸ್, ಡಿವೈಎಸ್ಪಿ ಮಂಜುನಾಥ್, ತಾ.ಪಂ. ಇಒ ಲಕ್ಷ್ಮಣ್, ಡಿಡಿಪಿಐ ಮಾಧವರೆಡ್ಡಿ, ಬಿಇಒ ಹನುಮಂತನಾಯಪ್ಪ, ಜಿ.ಪಂ ಎಇಇ ಮಂಜುನಾಥ್ ಪಿಡಬ್ಲೂಡಿ ಇಇ ಹನುಮಂತ ರಾವ್, ಅರಣ್ಯ ಇಲಾಖೆ ಅಧಿಕಾರಿ ಸುರೇಶ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮೋಹನ್, ಬಿಸಿಎಂ ಇಲಾಖೆಯ ಜಯರಾಮಯ್ಯ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಂಗಪ್ಪ, ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಮಾಜಿ ಅಧ್ಯಕ್ಷ ಎನ್. ಗಂಗಣ್ಣ, ಉಪಾಧ್ಯಕ್ಷೆ ಸುಜಾತ ಶಂಕರ್ ನಾರಾಯಣ್, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಪುರಸಭೆ ಸದಸ್ಯರಾದ ಶ್ರೀಧರ್, ಸಾಧಿಕ್, ಅಲೀಮ್, ಮಂಜುನಾಥ್ ಆಚಾರ್, ಎಸ್.ಬಿ.ಟಿ.ರಾಮು, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.