ಮಧುಗಿರಿ: ಪಟ್ಟಣದ ಹೃದಯ ಭಾಗದಲ್ಲಿರುವ ಮಲ್ಲೇಶ್ವರಸ್ವಾಮಿ ಮತ್ತು ವೆಂಕಟರಮಣಸ್ವಾಮಿ ದೇವಾಲಯಗಳ ನಡುವಿನ ಛತ್ರದ ಪ್ರಾಂಗಣದಲ್ಲಿರುವ ಮಂಟಪವನ್ನು ಕೆಡಹುವಾಗ ಮಲ್ಲೇಶ್ವರಸ್ವಾಮಿ ದೇವಾಲಯದ ಮುಖ್ಯ ಗೋಡೆಗೆ ಹಾನಿ ಉಂಟು ಮಾಡಲಾಗಿದೆ. ಗೋಡೆಯ ಕಲ್ಲುಗಳನ್ನ ಕಿತ್ತು ಹಾಕಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕಳೆದ ವಾರ ದೇವಸ್ಥಾನಗಳ ಹಿಂಭಾಗದಲ್ಲಿನ ಪೌಳಿಯ ಚಿಕ್ಕ ಬಾಗಿಲಿನ ಮೂಲಕ ಎರಡು ದೇವಾಲಯಗಳ ನಡುವಿನ ಪ್ರಾಂಗಣದ ಜಾಗವನ್ನು ಜೆಸಿಬಿ ಬಳಸಿ ಅಚ್ಚುಕಟ್ಟು ಮಾಡಲಾಗಿದೆ. ದೇಗುಲಗಳ ನಡುವಿನ ಛತ್ರದ ಮಂಟಪದ ಕಲ್ಲಿನ ಕಂಬಗಳನ್ನು ಉರುಳಿಸುವಾಗ ಎರಡೂ ದೇವಾಲಯಗಳ ಗೋಡೆಗಳಿಗೆ ಹಾನಿಯಾಗಿದೆ. ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳ ಮಧ್ಯ ಪ್ರವೇಶದಿಂದ ಮಂಟಪದ ಅವಶೇಷಗಳನ್ನು ಅಲ್ಲಿಯೇ ಬಿಡಲಾಗಿದೆ.

‘ಈಗ ಅಚ್ಚುಕಟ್ಟು ಮಾಡಿರುವ ಜಾಗದಲ್ಲಿ ಮಠವೊಂದು ಮಂದಿರ ನಿರ್ಮಾಣಕ್ಕೆ ಮುಂದಾಗಿದೆ. ಇದರಿಂದ ಸ್ಮಾರಕಕ್ಕೆ ಧಕ್ಕೆ ಉಂಟಾಗಿದ್ದು, ಇದು ಇತಿಹಾಸ ಅಳಿಸುವ, ಸಾಂಸ್ಕೃತಿಕ ಅನನ್ಯತೆಯನ್ನು ತಿರುಚುವ ಕೆಲಸ. ಇದನ್ನು ಕೂಡಲೇ ನಿಲ್ಲಿಸಿ, ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೈಸೂರಿನ ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಈ ಎರಡು ದೇವಾಲಯಗಳ ನಡುವೆ ವಿಶಾಲ ಕಲ್ಯಾಣಿ ನಿರ್ಮಿಸಲಾಗಿತ್ತು. ನಂತರ ಅದನ್ನು ಮುಚ್ಚಿ ಹಾಕಲಾಗಿದೆ ಎಂದು ಎಂ.ಡಿ. ಶ್ರೀನಿವಾಸ ಅವರ ‘ಮಧುಗಿರಿ ಇತಿಹಾಸ’ ಪುಸ್ತಕದಲ್ಲಿ ದಾಖಲಿಸಲಾಗಿದೆ. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ‘ಪರಂಪರೆ ಉಳಿಸಿ, ಪರಿಸರ ಉಳಿಸಿ, ಭವಿಷ್ಯ ಉಳಿಸಿ’, ಎರಡು ದೇವಾಲಯಗಳ ನಡುವೆ ಕಲ್ಯಾಣಿಯಿತ್ತು, ಅದರ ಪುನರುಜ್ಜೀವನಗೊಳ್ಳಲಿ ಎಂಬ ವಾಕ್ಯಗಳನ್ನು ಒಳಗೊಂಡ ಕರಪತ್ರ ಹರಿದಾಡುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-18-854876616

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.