ಮಧುಗಿರಿ: ಪಟ್ಟಣದ ತುಂಬೆಲ್ಲಾ ಹಬ್ಬಿರುವ ಗುಲ್ಮೊಹರ್ ಮರಗಳು ಎಲ್ಲೆಡೆ ಕೆಂಪು ರಂಗು ಚೆಲ್ಲುತ್ತಿದ್ದು, ಜನರ ಕಣ್ಮನ ಸೆಳೆಯುತ್ತಿವೆ.

ತಾಲ್ಲೂಕು ಕಚೇರಿ ಆವರಣ, ‘ಅಡುಗೆ ಮನೆ’ ಹೋಟೆಲ್ ಮುಂಭಾಗ, ಶಿರಾ ಗೇಟ್ ಬಳಿಯ ಕಲ್ಯಾಣಿ ಸುತ್ತ, ಏಕಶಿಲಾ ಬೆಟ್ಟದ ತಪ್ಪಲು, ಎಪಿಎಂಸಿ ಆವರಣ, ಉಪವಿಭಾಗಾಧಿಕಾರಿಕಚೇರಿ ಆವರಣ, ಕೆ. ಆರ್. ಬಡಾವಣೆಯ ಸರ್ಕಾರಿ ಪ್ರೌಢಶಾಲೆ ಆವರಣ, ಹೊಸದಾಗಿ ನಿರ್ಮಿಸುತ್ತಿರುವ ರೇಷ್ಮೆ ಸಹಾಯಕ ನಿರ್ದೇಶಕರ ಕಟ್ಟಡದ ಹತ್ತಿರ ಸೇರಿದಂತೆ ಬಹುತೇಕ ರಸ್ತೆಗಳ ಬದಿಯಲ್ಲಿ, ಉದ್ಯಾನದಲ್ಲಿ, ಶಾಲೆ - ಕಾಲೇಜುಗಳ ಆವರಣಗಳಲ್ಲಿ ಗುಲ್ಮೊಹರ್ ಮರಗಳು ಹೂವಿನ ಚಾದರ ಹೊದ್ದು ವಾಹನ ಸವಾರರ, ಉದ್ಯೋಗಿಗಳ, ದಾರಿಹೋಕರನ್ನು ಆಕರ್ಷಿಸುತ್ತಿವೆ.

ಹೂವುಗಳು ಕೆಂಪು ಮತ್ತು ಕೇಸರಿ ಬಣ್ಣಗಳು ಸಂಕರಗೊಂಡಂತೆ ಕಾಣುವುದರಿಂದ ಆಡುಭಾಷೆಯಲ್ಲಿ ‘ಕೆಂಕೇಸರಿ’ ಮರವೆಂದೂ ಕರೆಯಲಾಗುತ್ತಿದೆ. ಅಲ್ಲದೆ, ಈ ಮರಕ್ಕೆ ಕತ್ತಿ ಮರ, ಕೆಂಜಿಗದ ಗಿಡ, ಬೆಂಕಿ ಮರ, ಜ್ವಾಲೆಯ ಮರ ಎಂಬ ವಿವಿಧ ಹೆಸರುಗಳಿವೆ. ಬಂಗಾಳದಲ್ಲಿ ಕೃಷ್ಣಚುರ ಎಂಬ ಹೆಸರಿದ್ದರೆ, ಇಂಗ್ಲಿಷ್ನಲ್ಲಿ ‘ರಾಯಲ್ ಪೋಯೆನ್ಸಿಯಾನ’ ಅಥವಾ ‘ಫ್ಲಾಂಬೊಯಾಂಟ್’ ಎನ್ನುತ್ತಾರೆ.

ಏಪ್ರಿಲ್ನಿಂದ ಮೇ ತಿಂಗಳಲ್ಲಿ ಈ ಮರವು ಸಂಪೂರ್ಣವಾಗಿ ಹೂವುಗಳಿಂದ ಆವೃತವಾಗಿರುತ್ತವೆ. ಆದ್ದರಿಂದ ಇದಕ್ಕೆ ‘ಮೇ ಫ್ಲವರ್’ ಎಂತಲೂ ಕರೆಯುವರು. ಇದರ ಹೂವುಗಳು ಗುಲಾಬಿಯ ಛಾಪು ಹೊಂದಿರುವುದಕ್ಕೆ ಪರ್ಷಿಯನ್ ಭಾಷೆಯಲ್ಲಿ ‘ಗುಲ್ ಮೊಹರ್’ ಎನ್ನುವರು.

ಹಲವು ವರ್ಷಗಳ ಹಿಂದೆ ಬೇಸಿಗೆ ಕಾಲದಲ್ಲಿ ನಡೆವ ಊರಿನ ಯಾವುದೇ ಶುಭ ಸಮಾರಂಭಗಳಲ್ಲಿನ ತಳಿರು ತೋರಣಗಳಲ್ಲಿ ಕೆಂಕೇಸರಿ ಮರದ ಹೂವು- ಹಸಿರುಕಾಯಿ ಗೊಂಚಲುಗಳಿಗೆ ಪ್ರಾಶಸ್ತ್ಯ ಇರುತ್ತಿತ್ತು. ಜಾನುವಾರುಗಳ ಸಿಂಗಾರ, ಗೃಹಪ್ರವೇಶಗಳಲ್ಲಿನ ಚಪ್ಪರಕ್ಕೆ ಗಾಢ ಕೆಂಪು ರಂಗಿನ ಹೂವುಗಳು ಮೆರುಗು ತರುತ್ತಿದ್ದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-17-1403390643

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.