ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿ ಬ್ರಹ್ಮದೇವರಹಳ್ಳಿ ಸಮೀಪ ₹25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಉಪ ಸ್ಥಾವರದ ಶಂಕುಸ್ಥಾಪನೆಯನ್ನು ಶಾಸಕ ಕೆ.ಎನ್.ರಾಜಣ್ಣ ನೆರವೇರಿಸಿದರು.

ಬಯಲುಸೀಮೆಯ ಪ್ರದೇಶವಾಗಿರುವ ತಾಲ್ಲೂಕಿನ ಬಹಳಷ್ಟು ರೈತರು ಕೊಳವೆಬಾವಿ ಆಧಾರಿತ ಜಲಸಂಪನ್ಮೂಲದಿಂದಲೇ ಕೃಷಿ ಕೈಗೊಳ್ಳುತ್ತಿದ್ದು, ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯಲು ಸಮರ್ಪಕ ವಿದ್ಯುತ್ ಪೂರೈಕೆಯ ಅಗತ್ಯವಿರುವ ಕಾರಣಕ್ಕೆ ಈ ಭಾಗದಲ್ಲಿ ವಿದ್ಯುತ್ ಸ್ಥಾವರ ನಿರ್ಮಿಸಲಾಗುತ್ತಿದೆ. ಉಪಸ್ಥಾವರ ಸ್ಥಾಪನೆಯಿಂದ ಕತ್ತಿರಾಜನಹಳ್ಳಿ, ಬ್ರಹ್ಮದೇವರಹಳ್ಳಿ, ಕಾಡಪ್ಪನಪಾಳ್ಯ, ಹೊಸಹಳ್ಳಿ, ಚಿನ್ನೇನಹಳ್ಳಿ, ವೀರಚಿನ್ನೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರು.

ಈಗಾಗಲೇ ಗರಣಿ ಗ್ರಾಮ ಸಮೀಪ ವಿದ್ಯುತ್ ಸ್ಥಾವರದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದ್ದು, ಕವಣದಾಲ ಮತ್ತು ಬೆಲ್ಲದಮಡಗು ಗ್ರಾಮದಲ್ಲಿ ವಿದ್ಯುತ್ ಸ್ಥಾವರಗಳನ್ನು ನಿರ್ಮಾಣ ಮಾಡಲಾಗುವುದು. ಬಡವರು ಹಾಗೂ ರೈತರ ನಿರೀಕ್ಷೆಗೆ ತಕ್ಕಂತೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದ್ದು, ಸರ್ಕಾರದ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದರು.

ಪಡಸಾಲಹಟ್ಟಿ, ಲಕ್ಲಿಹಟ್ಟಿ ಹಾಗೂ ಆರ್.ಗೊಲ್ಲರಹಟ್ಟಿ ಗ್ರಾಮದ 396 ಮಂದಿಗೆ ಹಕ್ಕುಪತ್ರ ನೀಡಲಾಯಿತು.

ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ , ಕೆಪಿಸಿಸಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ, ಗುತ್ತಿಗೆದಾರರಾದ ಮಹಾಲಿಂಗಪ್ಪ, ಯೋಗೀಶ್, ಕೆಪಿಟಿಸಿಎಲ್ ಇಇ ಸಯ್ಯದ್ ಮಹಮ್ಮದ್, ಬೆಸ್ಕಾಂ ಇಇ ಜಗದೀಶ್, ಎಇಇ ಮಾಯಕಣ್ಣ ನಾಯಕ್, ಬೆಸ್ಕಾಂ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ, ತಾ.ಪಂ. ಎಡಿ ಧನಂಜಯ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-17-1555118534

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.