ಮಧುಗಿರಿ: ವಿಳಾಸ ಕೇಳವ ನೆಪದಲ್ಲಿ ಪಟ್ಟಣದ ದೊಡ್ಡಪೇಟೆಯ ದೇವಾಂಗ ಬೀದಿಯ ಮನೆಗೆ ನುಗ್ಗಿ ಲಕ್ಷ್ಮಮ್ಮ ಅವರ ಸರ ಕದ್ದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಪ್ರದೇಶ ರಾಜ್ಯದ ಕಲ್ಯಾಣದುರ್ಗ ತಾಲ್ಲೂಕಿನ ತಿಮ್ಮಸಮುದ್ರದ ರಾಜು(30), ಅನಂತಪುರ ಬಳಿಯ ಪಂಪನೂರು ಗ್ರಾಮದ ಓಬಣ್ಣ (45) ಬಂಧಿತರು.

ಸರ ದೋಚುವ ಸಂದರ್ಭದಲ್ಲಿ ವೃದ್ಧೆ ಚೀರಾಡಿದ್ದನ್ನು ಕೇಳಿ ಸ್ಥಳಕ್ಕೆ ಬಂದಿದ್ದ ನೆರೆಹೊರೆಯವರು ಕಳ್ಳರನ್ನು ಹಿಡಿಯಲು ಯತ್ನಿಸಿದ್ದರು. ಜನರಿಂದ ತಪ್ಪಿಸಿಕೊಳ್ಳುವ ಸಮಯದಲ್ಲಿ ಸರಗಳ್ಳರು ಕೈಯಲ್ಲಿದ್ದ ವಾಹನದ ನಂಬರ್ ಪ್ಲೇಟ್ ಕೆಳಗೆ ಬೀಳಿಸಿದ್ದರು. ನಂಬರ್ ಪ್ಲೇಟ್ ಸಹಾಯದಿಂದ ಕಳ್ಳರ ಜಾಡು ಹಿಡಿದ ಪೊಲೀಸರು ಅನಂತಪುರದಲ್ಲಿ ಒಬ್ಬನನ್ನು, ಮತ್ತೊಬ್ಬರನ್ನು ತೆಲಂಗಾಣದ ಗಡಿಭಾಗದಲ್ಲಿ ಬಂಧಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-17-856603330

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.