ಮಧುಗಿರಿ: ಹತ್ತಿ ಬೆಳೆಗಾರರು ಬೀಜ ಕಂಪನಿಗಳಿಂದ ಕರಾರು ಒಪ್ಪಂದ ಮಾಡಿಕೊಂಡ ನಂತರವೇ ಬಿತ್ತನೆಗೆ ಮುಂದಾಗಬೇಕು. ಇಲ್ಲವಾದರೆ ಬೆಳೆ ನಷ್ಟ ಹಾಗೂ ವಿಳಂಬ ಪಾವತಿಯಿಂದ ರೈತರು ನಷ್ಟಕ್ಕೀಡಾಗಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಸಿ. ಶಂಕರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಬಾರಿ ಉತ್ತಮ ಬೆಳೆ ಬೆಳೆದಿದ್ದರಿಂದ ಸ್ಫೂರ್ತಿಗೊಂಡು ತಾಲೂಕಿನಲ್ಲಿ ಈಗಾಗಲೇ ನೂರಾರು ರೈತರು ಹತ್ತಿ ಬೀಜ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಡಿಸೆಂಬರ್ನಲ್ಲಿ ಫಸಲು ತೆಗೆದುಕೊಂಡು ಹೋದವರು ಇಲ್ಲಿಯವರೆಗೆ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಹಣ ಸಂದಾಯ ಮಾಡಿಲ್ಲ. ಈ ಕಾರಣದಿಂದ ಕರಾರು ಇಲ್ಲದೆ ಯಾವುದೇ ಕಂಪನಿಯಿಂದ ನಿಗದಿತ ಸಮಯಕ್ಕೆ ಹಣ ಪಡೆಯಲು ಮತ್ತು ನಷ್ಟ ಪರಿಹಾರ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಇದನ್ನೇ ದಾಳವಾಗಿ ಮಾಡಿಕೊಂಡ ಹಲವಾರು ಕಂಪನಿಗಳು ಕ್ಷೇತ್ರದಲ್ಲಿ ಯಾವುದೇ ಕಚೇರಿ ತೆರೆಯದೆ ಕೇವಲ ಏಜೆಂಟರುಗಳ ಮೂಲಕ ಒಪ್ಪಂದ ಮಾಡಿಕೊಂಡು ಬಿತ್ತನೆ ಬೀಜ ನೀಡುತ್ತಿವೆ ಈ ಬಗ್ಗೆ ಜಿಲ್ಲಾಧಿಕಾರಿಗೆ ಜನಸಂಪರ್ಕ ಸಭೆಯಲ್ಲಿ ತಿಳಿಸಲಾಗಿದೆ. ಏಪ್ರಿಲ್ 13 ರಂದು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಕೂಡ ನಡೆಸಲಾಗಿದೆ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-17-1616837488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.