ಮಧುಗಿರಿ: ಪಟ್ಟಣದ ಎರಡು ಮತ್ತು ಮೂರನೇ ವಾರ್ಡ್ನಲ್ಲಿ ಸಾರ್ವಜನಿಕರಿಗೆ ಸ್ವಚ್ಛ ಭಾರತ್ ಮಿಷನ್ ಕಮ್ಯುನಿಟಿ ಮೊಬೈಲೇಸರ್ಸ್ನಿಂದ ನಿತ್ಯ ಸಂಗ್ರಹವಾಗುವ ಘನತ್ಯಾಜ್ಯವನ್ನು ಮೂಲದಲ್ಲಿಯೇ ನಾಲ್ಕು ವಿಭಾಗದಲ್ಲಿ ವಿಂಗಡಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಕಮ್ಯುನಿಟಿ ಮೊಬೈಲೇಸರ್ ಮಮತಾ ಮಾತನಾಡಿ, ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಸುಪ್ರೀಂಕೋರ್ಟ್ ನಿರ್ದೇಶನದಡಿ ಏಪ್ರಿಲ್ 1ರಿಂದ ಜಾರಿಗೆ ತಂದಿರುವ ಹೊಸ ನಿಯಮದನ್ವಯ ಘನತ್ಯಾಜ್ಯವನ್ನು ಹಸಿ ಕಸ, ಒಣ ಕಸ, ಸ್ಯಾನಿಟರಿ ಕಸ ಮತ್ತು ವಿಶೇಷ ತ್ಯಾಜ್ಯ ಎಂದು ವಿಂಗಡಿಸಲಾಗಿದೆ. ವಿಶೇಷ ತ್ಯಾಜ್ಯ ಎಂದರೆ ಹಳೆಯ ಸೆಲ್, ಬ್ಯಾಟರಿ, ಬಣ್ಣದ ಖಾಲಿ ಡಬ್ಬಿ, ಅವಧಿ ಮುಗಿದ ಔಷಧಿ, ಮಾತ್ರೆ, ಖಾಲಿ ಟಾನಿಕ್ ಬಾಟಲ್, ಬಲ್ಬ್ ಮೊದಲಾದವುಗಳನ್ನು ಪ್ರತ್ಯೇಕವಾಗಿ ವಿಂಗಡಿಸಿಕೊಳ್ಳಬೇಕು. ಬೀದಿ ಬದಿ ವ್ಯಾಪಾರಿಗಳು, ಹೋಟೆಲ್, ಬಾರ್ ಮತ್ತು ರೆಸ್ಟೊರೆಂಟ್, ತರಕಾರಿ ವ್ಯಾಪಾರಿಗಳು, ಸೇರಿದಂತೆ ಎಲ್ಲ ಸಾರ್ವಜನಿಕರು ಮೂಲದಲ್ಲಿಯೇ ಕಸ ವಿಂಗಡಿಸಿ ಸಮರ್ಪಕ ವಿಲೇವಾರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮಳೆಗಾಲ ಆರಂಭವಾಗಿರುವುದರಿಂದ ಸ್ಯಾನಿಟರಿ ಪ್ಯಾಡ್, ವಿಶೇಷ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅರೋಗ್ಯ ಸಮಸ್ಯೆ, ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದಲ್ಲದೆ, ತ್ಯಾಜ್ಯವು ಚರಂಡಿ ಸೇರಿ, ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಸಮಸ್ಯೆಗೆ ಕಾರಣವಾಗುತ್ತದೆ ಎಂದರು.

ಪಟ್ಟಣದ ಅಭಿವೃದ್ಧಿಗೆ ತ್ಯಾಜ್ಯ ನಿರ್ವಹಣೆ ಬಹುದೊಡ್ಡ ಕೊಡುಗೆ ನೀಡುತ್ತದೆ. ಘನತ್ಯಾಜ್ಯ ನಿರ್ವಹಣೆ ಕೇವಲ ಪೌರ ಕಾರ್ಮಿಕರ ಅಥವಾ ಸ್ಥಳೀಯ ಆಡಳಿತದ ಕಾರ್ಯವಲ್ಲ. ಪ್ರತಿಯೊಬ್ಬರ ಜವಾಬ್ದಾರಿ. ಸಾರ್ವಜನಿಕರ ಸಹಾಭಾಗಿತ್ವವಿರದೆ ಪಟ್ಟಣದ ಸೌಂದರ್ಯ ಅಸಾಧ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅಭಿಪ್ರಾಯಪಟ್ಟರು.

ಕಮ್ಯುನಿಟಿ ಮೊಬೈಲೇಸರ್ಸ್ ಪವಿತ್ರಾ, ಸರಸ್ವತಿ, ಮೇಘಶ್ರೀ, ಶ್ರೀಲಕ್ಷ್ಮೀ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-17-754634884

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.