ಮಧುಗಿರಿ: ಭಾನುವಾರ ಮಧ್ಯಾಹ್ನದ ವೇಳೆಗೆ ಮಧುಗಿರಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರೆನ್ನದೆ ಎಲ್ಲರೂ ಕೈಯಲ್ಲಿ ಲಗೇಜು ಹಿಡಿದು ಬೆಂಗಳೂರು ಬಸ್ ಬರುವ ಕಡೆ ನೋಡುತ್ತಿರುತ್ತಾರೆ. ಬಸ್ ಕಂಡ ಕೂಡಲೇ ಸೀಟು ಹಿಡಿಯಲು ಸ್ಪರ್ಧೆಗಿಳಿದವರಂತೆ ಮುಗಿಬೀಳುವುದು ಸಾಮಾನ್ಯ ಸಂಗತಿಯಾಗಿದೆ.

ಮಧುಗಿರಿ, ಪಾವಗಡ ನೆರೆಯ ಆಂಧ್ರದ ಮಡಕಶಿರಾ ಹಾಗೂ ಕಲ್ಯಾಣದುರ್ಗ ಭಾಗದ ಬಹುತೇಕ ಜನರು ಬೆಂಗಳೂರಿನಲ್ಲಿ ದುಡಿದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಮದುವೆ ಹೆಚ್ಚಿರುವ ಕಾರಣ, ಸರಣಿ ರಜೆ, ವಾರಾಂತ್ಯದ ರಜೆಗೆಂದು ಊರಿಗೆ ತೆರಳಿದ್ದವರು ಮತ್ತೆ ಮಹಾನಗರದತ್ತ ಮುಖ ಮಾಡುವುದಕ್ಕೆ ಬಸ್ ನಿಲ್ದಾಣಕ್ಕೆ ಬಂದವರೇ ಬಿಸಿಲನ್ನು ಲೆಕ್ಕಿಸದೆ ಬಸ್ ಏರಲು ಸ್ಪರ್ಧೆಗಿಳಿಯುತ್ತಾರೆ.

ಬೆಂಗಳೂರು- ಕಲ್ಯಾಣದುರ್ಗ, ಬೆಂಗಳೂರು- ಪಾವಗಡ ಮಾರ್ಗದಲ್ಲಿ ಸಂಚರಿಸುವ ಬಸ್ಗಳು ಮಧುಗಿರಿ ಬಸ್ ನಿಲ್ದಾಣಕ್ಕೆ ಬರುವಾಗಲೇ ಭರ್ತಿಯಾಗಿರುತ್ತವೆ. ನಿಂತುಕೊಂಡಾದರೂ ಸರಿ ರಾಜಧಾನಿ ತಲುಪಬೇಕು, ಇಲ್ಲವಾದರೆ ಸೋಮವಾರ ಬೆಳಿಗ್ಗೆ ಉದ್ಯೋಗಕ್ಕೆ ಹಾಜರಾಗಲು ಕಷ್ಟವಾಗುತ್ತದೆ ಎಂಬುದು ಬಹುತೇಕ ಪ್ರಯಾಣಿಕರ ಅನುಭವವಾಗಿದೆ.

ಪೂರ್ಣಗೊಳ್ಳದ ರಾಯದುರ್ಗ- ತುಮಕೂರು ರೈಲ್ವೆ ಮಾರ್ಗದ ಕಾರಣ ಮತ್ತು ಸರ್ಕಾರದ ‘ಶಕ್ತಿ’ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ವಾರಾಂತ್ಯದಲ್ಲಿ ಬೆಂಗಳೂರು ಕಡೆಗೆ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-17-511042602

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.