ಜಿಲ್ಲೆಯಲ್ಲಿ ‘ಗಾಂಧಿ 150’ ಸ್ತಬ್ದ ಚಿತ್ರ ಸಂಚಾರ

7

ಜಿಲ್ಲೆಯಲ್ಲಿ ‘ಗಾಂಧಿ 150’ ಸ್ತಬ್ದ ಚಿತ್ರ ಸಂಚಾರ

Published:
Updated:

ತುಮಕೂರು: ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗಾಂಧೀಜಿ ಅವರ ವಿಚಾರ ಧಾರೆ ಕುರಿತು 2 ಸ್ತಬ್ಧ ಚಿತ್ರಗಳನ್ನು ಸಿದ್ಧಪಡಿಸಿದ್ದು, ಅಕ್ಟೋಬರ್ 6 ಮತ್ತು 7ರಂದು ಜಿಲ್ಲೆಯ ತುಮಕೂರು, ಗುಬ್ಬಿ ಮತ್ತು ಶಿರಾ ತಾಲ್ಲೂಕಿನಲ್ಲಿ ಸಂಚರಿಸಲಿದೆ.

ಈ ಸ್ತಬ್ದ ಚಿತ್ರದಲ್ಲಿ ಗಾಂಧೀಜಿಯವರ ಪ್ರತಿಮೆ, ಚರಕ ಹಾಗೂ 18 ಮಂದಿ ಹೋರಾಟಗಾರರೊಂದಿಗೆ ಗಾಂಧೀಜಿಯವರ ಮುಂದಾಳತ್ವ, ಬಾಲಕ ಗಾಂಧಿ, ದೇಶಿ ಉಡುಪಿನ ಗಾಂಧಿ, ಬ್ಯಾರಿಸ್ಟರ್ ಗಾಂಧಿ, ಪಥಕದಲ್ಲಿ ಗಾಂಧಿ, ಸಮಾಜ ಪರಿಶೋಧಕ ಗಾಂಧಿ, ಮಗುವಿನ ಜೊತೆ ಮಗುವಾಗಿ ಗಾಂದಿ, ಬರವಣಿಗೆ ನಿರತ ಗಾಂಧಿ, ಅನಂತ ನಡಿಗೆ ಗಾಂಧಿ ವಿಚಾರಧಾರೆಗಳನ್ನು ಪ್ರಸ್ತುತ ಪಡಿಸಲಾಗುತ್ತಿದೆ.

ಸ್ತಬ್ದ ಚಿತ್ರವು ಅಕ್ಟೋಬರ್ 6ರ ಮಧ್ಯಾಹ್ನ 3 ಗಂಟೆಗೆ ತುಮಕೂರು ಜಿಲ್ಲೆಯನ್ನು ಪ್ರವೇಶಿಸಲಿದ್ದು, ಸಂಜೆ ಜಿಲ್ಲಾ ಕೇಂದ್ರದಲ್ಲಿ ತಂಗಲಿದೆ. ಅ.7ರ ಬೆಳಿಗ್ಗೆ ತುಮಕೂರು ನಗರದಿಂದ ಹೊರಟು ಗುಬ್ಬಿ ತಾಲ್ಲೂಕಿನಲ್ಲಿ ಬೆಳಿಗ್ಗೆ 10 ಗಂಟೆಗೆ, ಶಿರಾ ತಾಲ್ಲೂಕಿನಲ್ಲಿ ಮಧ್ಯಾಹ್ನ 3 ಗಂಟೆಗೆ ಸಂಚರಿಸಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮನವಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !