ಗುಬ್ಬಿ: ತಾಲ್ಲೂಕಿನಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು ಇದರಿಂದ ಹಳೆಯ ಮನೆ ಗೋಡೆಗಳು ಕುಸಿಯುತ್ತಿವೆ.
ಶನಿವಾರ ಬೆಳಗ್ಗೆ ನಿಟ್ಟೂರು ಹೋಬಳಿ ಮುದ್ದಾಪುರ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಮನೆ ಗೋಡೆ ಕುಸಿದು ಉಗ್ರಯ್ಯ (60) ಮೃತಪಟ್ಟಿದ್ದಾರೆ.
ಮುದ್ದಾಪುರದ ತನ್ನ ಮಾವನ ಮನೆಗೆ ಪಿತೃಪಕ್ಷದ ಹಬ್ಬಕ್ಕೆ ಬಂದಿದ್ದು ಇಂದು ಬೆಳಗ್ಗೆ ಗ್ರಾಮದ ನಾಗರಾಜುರವರ ಕೊಟ್ಟಿಗೆ ಮನೆಯ ಪಕ್ಕದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುವಾಗ ಮನೆಯ ಗೋಡೆಯು ಕುಸಿದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.